ಕುಡ್ಲದ ಮೀನಿನ ರುಚಿಗೆ ಮಾರು ಹೋದ ಗಾಯಕ ಶಂಕರ್‌ ಮಹಾದೇವನ್‌

ಕುಡ್ಲದ ಮೀನಿನ ರುಚಿಗೆ ಮಾರು ಹೋದ ಗಾಯಕ ಶಂಕರ್‌ ಮಹಾದೇವನ್‌

YK   ¦    Jan 08, 2019 03:50:48 PM (IST)
ಕುಡ್ಲದ ಮೀನಿನ ರುಚಿಗೆ ಮಾರು ಹೋದ ಗಾಯಕ ಶಂಕರ್‌ ಮಹಾದೇವನ್‌

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ವಿರಾಸತ್ ನಲ್ಲಿ ಕಾರ್ಯಕ್ರಮ ನೀಡಲು ಬಂದ ಖ್ಯಾತ ಗಾಯಕ ಶಂಕರ್ ಮಹದೇವನ್ ಅವರ ತಂಡ ಮಂಗಳೂರಿನ ಹೋಟೆಲ್‌ ನಾರಾಯಣ ಇಲ್ಲಿನ ಮೀನಿನ ರುಚಿ ಸವಿದು ಮಾರು ಹೋಗಿದ್ದಾರೆ.

10ರಿಂದ 12ಮಂದಿಯ ಇವರ ತಂಡ ಭಾನುವಾರ ಮಧ್ಯಾಹ್ನ ನಾರಾಯಣ ಹೊಟೇಲ್ ಗೆ ಬಂದಿದೆ.

ಅಲ್ಲಿ ಮೀನಿನ ಊಟದೊಂದಿಗೆ ಅಂಜಲ್‌, ಪಾಪ್ಲೆಟ್‌ ಫ್ರೈಯನ್ನು ಸವಿದ ಇವರು ಮಾರು ಹೋಗಿದ್ದಾರೆ. ನಂತರ ಹೊಟೇಲ್ ಮುಂದೆ ಪ್ರತಿಕ್ರಿಯಿಸಿದ ಮಹಾದೇವನ್ ಅವರು 'ನೀವು ಮಂಗಳೂರಿಗೆ ಬಂದಲ್ಲಿ ಹೊಟೇಲ್ ನಾರಾಯಣ ಗೆ ಬನ್ನಿ.

ಇಲ್ಲಿನ ಖಾದ್ಯಗಳ ತುಂಬಾ ರುಚಿಯಾಗಿದ್ದು ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ನಾನು ಇಲ್ಲಿನ ಮೀನಿನ ಊಟಕ್ಕೆ ಫಿದಾ ಆಗಿದ್ದೇನೆ ಎಂದು ಇನ್ ಸ್ಟ್ರಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.