ಪೊಲೀಸರ ವಶಕ್ಕೆ ನಟ ದುನಿಯಾ ವಿಜಯ್

ಪೊಲೀಸರ ವಶಕ್ಕೆ ನಟ ದುನಿಯಾ ವಿಜಯ್

YK   ¦    Jun 08, 2018 12:41:54 PM (IST)
ಪೊಲೀಸರ ವಶಕ್ಕೆ ನಟ ದುನಿಯಾ ವಿಜಯ್

ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಆರೋಪದಡಿಯಲ್ಲಿ ತಲೆ ಮರೆಸಿಕೊಂಡಿದ್ದ ನಟ ದುನಿಯಾ ವಿಜಯ್‌ನನ್ನು ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ದುನಿಯಾ ವಿಜಯ್ ಮೇಲೆ ಎಫ್ ಐಆರ್ ಆದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪೊಲೀಸರಿಂದ ತಲೆ ಮರೆಸಿಕೊಂಡು ರೆಸಾರ್ಚ್‌ನಲ್ಲಿ ತಂಗಿದ್ದ ವಿಜಯ್‌ನನ್ನು ಪೊಲೀಸರು ತಮಿಳುನಾಡು-ಕರ್ನಾಟಕ ಗಡಿ ಭಾಗದಲ್ಲಿ ವಶಕ್ಕೆ ಪಡೆದಿದ್ದು, ಬೆಂಗಳೂರಿಗೆ ಕರೆತರುತ್ತಿದ್ದಾರೆ.

ಎಫ್​​ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ದುನಿಯಾ ವಿಜಯ್‌ಗಾಗಿ ಪೊಲೀಸರು ಹುಡುಕಾಟ ಆರಂಭಿಸುತ್ತಿದ್ದಂತೆಯೇ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ನಟ ವಿಜಯ್‌ ತಲೆಮರೆಸಿಕೊಂಡಿದ್ದರು.

ಘಟನೆ ಹಿನ್ನಿಲೆ: ‘ಮಾಸ್ತಿಗುಡಿ’ ಚಿತ್ರೀಕರಣ ವೇಳೆ ನಟರಿಬ್ಬರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸುಂದರ್ ಪಿ.ಗೌಡ ಬಂಧನಕ್ಕೆ ಬಂದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ನಟ ದುನಿಯಾ ವಿಜಯ್ ವಿರುದ್ಧ ಐಪಿಸಿ ಸೆಕ್ಷನ್ 353, 225ರಡಿ ಎಫ್​​ಐಆರ್ ದಾಖಲಿಸಲಾಗಿತ್ತು. ರಾಮನಗರ ಜೆಎಂಎಫ್​​ಸಿ ಕೋರ್ಟ್​​ನಿಂದ ವಾರಂಟ್ ಜಾರಿಯಾಗಿತ್ತು. ದುನಿಯಾ ವಿಜಯ್ ವಿರುದ್ಧ ತಾವರೆಕೆರೆ ಠಾಣೆಯ ಮುಖ್ಯಪೇದೆ ಗೋವಿಂದರಾಜು ದೂರು ನೀಡಿದ್ದರು.