ಹೊಸ ನಟನಟಿಯರಿದ್ದರೂ ಸೂಪರ್ ಆಗಿ ಮೂಡಿಬಂದಿದೆ ಆದಿಪುರಾಣ

ಹೊಸ ನಟನಟಿಯರಿದ್ದರೂ ಸೂಪರ್ ಆಗಿ ಮೂಡಿಬಂದಿದೆ ಆದಿಪುರಾಣ

Vedant   ¦    Oct 06, 2018 07:00:50 PM (IST)
ಹೊಸ ನಟನಟಿಯರಿದ್ದರೂ ಸೂಪರ್ ಆಗಿ ಮೂಡಿಬಂದಿದೆ ಆದಿಪುರಾಣ

ಯುವ ನಟ, ನಟಿಯರೇ ನಟಿಸಿರುವಂತಹ ನಿನ್ನೆ ಬಿಡುಗಡೆಯಾಗಿರುವ ಆದಿ ಪುರಾಣ ಸಿನಿಮಾ ಕಂಪ್ಲೀಟ್ ಫ್ಯಾಮಿಲಿ ಎಂಟರ್ ಟೈನರ್. ಹದಿಹರೆಯದಲ್ಲೇ ಯುವಕನೊಬ್ಬನಿಗೆ ಮದುವೆ ಮಾಡಿಸಿದರೆ ಆತನ ಜೀವನವು ಹೇಗೆಲ್ಲಾ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ ಎನ್ನುವುದನ್ನು ಹಾಸ್ಯಲೇಪಿತವಾಗಿ ಹೇಳಲಾಗಿದೆ.

ಸಿನಿಮಾವು ಚಿತ್ರದ ನಾಯಕ ಆದಿತ್ಯನ ಜೀವನದ ಸುತ್ತಲು ಸುತ್ತುತ್ತಾ ಇರುತ್ತದೆ. ಆದಿತ್ಯನ ವೃತ್ತಿ ಜೀವನ ಉತ್ತಮವಾಗಿದ್ದರೂ ವೈಯಕ್ತಿಕ ಜೀವನ ಮಾತ್ರ ಸರಿಯಾಗಿರುವುದಿಲ್ಲ. ತನಗೊಬ್ಬಳು ಗರ್ಲ್ ಫ್ರೆಂಡ್ ಬೇಕು ಎಂದು ಆಲೋಚಿಸುವ ವೇಳೆ ಆತನಿಗೆ ತಂದೆ ಮದುವೆ ಮಾಡಿಸುತ್ತಾರೆ. ಇದು ಜೀವನದ ಹೊಸ ಆರಂಭವೆಂದು ಆತ ಭಾವಿಸಿದರೂ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುವುದು. ಆದಿತ್ಯನ ವೈಯಕ್ತಿಕ ಬದುಕಿನ ವೈಫಲ್ಯವು ಹೆಚ್ಚಾಗುತ್ತಾ ಚಿತ್ರವು ಕೊನೆಯಾಗುವುದು.

ನಿರ್ದೇಶಕ ಮೋಹನ್ ಕಾಮಾಕ್ಷಿ ಅವರಿಂದ ಮೂಡಿಬಂದಿರುವಂತಹ ಸುಂದರ ರೋಮ್ಯಾಂಟಿಕ್ ಕಾಮಿಡಿ ಚಿತ್ರ ಇದಾಗಿದೆ. ಮೊದಲ ಸಿನಿಮಾವಾದರೂ ಇದು ತುಂಬಾ ಅನುಭವಿ ನಿರ್ದೇಶಕರು ಮಾಡಿದ ಸಿನಿಮಾದಂತಿದೆ. ಸಂಕಲನವು, ತಾಂತ್ರಿಕವಾಗಿಯೂ ಉತ್ತಮವಾಗಿದೆ.

ಆದಿತ್ಯನ ಪಾತ್ರದಲ್ಲಿ ಶಶಾಂಕ್ ಅತ್ಯುತ್ತಮವಾಗಿ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶಗಳು ಹುಡುಕಿ ಬರಬಹುದು. ನಟಿಯರಾದ ಅಹಲ್ಯಾ ಸುರೇಶ್ ಮತ್ತು ಮೋಕ್ಷ ಕುಶಾಲ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಆದರೆ ಚಿತ್ರದ ಹೆಚ್ಚಿನ ಶ್ರೇಯಸ್ಸು ರಂಗಾಯನ ರಘು ಅವರಿಗೆ ಸಲ್ಲುತ್ತದೆ. ಸಿನಿಮಾವು ನಿಮ್ಮ ಹಣ ಹಾಗೂ ಸಮಯಕ್ಕೆ ಯಾವುದೇ ಮೋಸ ಮಾಡಲ್ಲ.