ಭುಜದ ಶಸ್ತ್ರಚಿಕಿತ್ಸೆಗೆ ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಡಾ.ಶಿವರಾಜ್ ಕುಮಾರ್ ಅವರು ತಮ್ಮ ಹುಟ್ಟು ಹಬ್ಬವನ್ನು ಅಲ್ಲೇ ಕುಟುಂಬದ ಜತೆ ಆಚರಿಸಿಕೊಂಡರು.
ಈ ವೇಳೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಶಿವಣ್ಣ ಅವರು ಶಿವಣ್ಣನಿಗೆ ಬರ್ತ್ ಡೆ ಸರ್ಪ್ರೈಸ್ ಆಗಿ ಭೇಟಿ ನೀಡಿ ಶುಭಾಶಯ ಕೋರಿದ್ದಾರೆ. ಇದನ್ನು ಶಿವಣ್ಣ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಕ್ರಿಕೆಟ್ ಅಂದ್ರೆ ನನಗೆಇಷ್ಟ. ಅದರಲ್ಲೂ ನಮ್ಮ ಕನ್ನಡದ ಕ್ರಿಕೆಟ್ ಆಟಗಾರರು ಅಂದ್ರೆ ನನಗೆ ಪ್ರೀತಿ ಜಾಸ್ತಿ. ನನ್ನ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಆಗಿ ಸಿಕ್ಕ ನನ್ನ ನೆಚ್ಚಿಟ ಆಟಗಾರ ನನ್ನ ಒಳ್ಳೆಯ ಸ್ನೇಹಿತ ಅನಿಲ್ ಕುಂಬ್ಳೆ ಭೇಟಿ ಖುಷಿ ಕೊಡ್ತು’ ಎಂದು ಶಿವಣ್ಣ ಬರೆದುಕೊಂಡಿದ್ದಾರೆ.