ಬಿಗ್ ಬಾಸ್ ಸಹಸ್ಪರ್ಧಿ ಆಂಡಿ ವಿರುದ್ಧ ನಟಿ ಕವಿತಾ ಗೌಡ ದೂರು

ಬಿಗ್ ಬಾಸ್ ಸಹಸ್ಪರ್ಧಿ ಆಂಡಿ ವಿರುದ್ಧ ನಟಿ ಕವಿತಾ ಗೌಡ ದೂರು

YK   ¦    Feb 12, 2019 10:34:11 AM (IST)
ಬಿಗ್ ಬಾಸ್ ಸಹಸ್ಪರ್ಧಿ ಆಂಡಿ ವಿರುದ್ಧ ನಟಿ ಕವಿತಾ ಗೌಡ ದೂರು

ಬೆಂಗಳೂರು: ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿ ಕವಿತಾ ಗೌಡ ಅವರು ತಮ್ಮ ಬಿಗ್ ಬಾಸ್ ಸಹಸ್ಪರ್ಧಿ ಆಂಡಿ ವಿರುದ್ಧ ಸೋಮವಾರ ಮಹಿಳಾ ಆಯೋಗಕ್ಕೆ ದೂರನ್ನು ನೀಡಿದ್ದಾರೆ.

ಆಂಡಿ ಅವರು ತನಗೆ ಬಿಗ್ ಬಾಸ್ ಒಳಗೆ ಹಾಗೂ ಹೊರಗಡೆ ಬಂದ ಮೇಲೂ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಈಚೆಗೆ ಮಜಾ ಟಾಕೀಸ್ ಶೋ ನಲ್ಲಿ ಭಾಗವಹಿಸಿದ್ದ ವೇಳೆ ಅವರು ನನ್ನ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಇದರಿಂದ ನೊಂದು ಮಹಿಳಾ ಆಯೋಗಕ್ಕೆ ದೂರನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ.

ಈ ವಿಚಾರ ಸಂಬಂಧ ಬಿಗ್ ಬಾಸ್ ಸ್ಪರ್ಧಿಮುರುಳಿ ಪ್ರತಿಕ್ರಿಯಿಸಿ, ಬಿಗ್ ಬಾಸ್ ಒಳಗಡೆ ಆಟಕ್ಕಾಗಿ ಆ ರೀತಿ ನಡೆದುಕೊಂಡಿದ್ದಾನೆ. ಹೊರಗಡೆ ಬಂದ ಮೇಲೆ ಆ ರೀತಿ ನಡೆದುಕೊಳ್ಳುವವನಲ್ಲ. ಸುಮ್ಮನೆ ಯಾರ ಬಗ್ಗೆಯೂ ಅಪಪ್ರಚಾರ ಮಾಡಬಾರದು ಎಂದು ಹೇಳಿದರು.