ನಟಿ ಜರೀನಾ ಖಾನ್ ಕಾರಿಗೆ ಬೈಕ್ ಡಿಕ್ಕಿ: ಸವಾರ ಸಾವು

ನಟಿ ಜರೀನಾ ಖಾನ್ ಕಾರಿಗೆ ಬೈಕ್ ಡಿಕ್ಕಿ: ಸವಾರ ಸಾವು

YK   ¦    Dec 13, 2018 01:12:05 PM (IST)
ನಟಿ ಜರೀನಾ ಖಾನ್ ಕಾರಿಗೆ ಬೈಕ್ ಡಿಕ್ಕಿ: ಸವಾರ ಸಾವು

ಗೋವಾ: ಬಾಲಿವುಡ್ ನಟಿ ಜರೀನಾ ಖಾನ್ ಮಾಲೀಕತ್ವದ ಕಾರಿಗೆ ಬೈಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಗೋವಾದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ನಿತೇಶ್ ಗೋರಾಲ್(31) ಎಂದು ಗುರುತಿಸಲಾಗಿದೆ.

ಅಪಘಾತ ನಡೆಯುವಾಗ ಕಾರಿನಲ್ಲಿ  ನಟಿ ಹಾಗೂ ಆತನ ಚಾಲಕ ಇದ್ದರು ಎಂದು ಪೊಲೀಸರು ತಿಳಿದಿದ್ದಾರೆ.

ಜರೀನಾ ಖಾನ್ ಅವರು 2010ರಲ್ಲಿ ಬಿಡುಗಡೆಯಾದ ವೀರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಆಡಿದ್ದರು.