ಕಠಿಣ ಶ್ರಮ, ತಾಳ್ಮೆ ಇದ್ದರೆ ಕಲೆಯಲ್ಲಿ ಸಾಧಿಸಬಹುದು: ಅಶ್ವಿತ್ ಕುಲಾಲ್

ಕಠಿಣ ಶ್ರಮ, ತಾಳ್ಮೆ ಇದ್ದರೆ ಕಲೆಯಲ್ಲಿ ಸಾಧಿಸಬಹುದು: ಅಶ್ವಿತ್ ಕುಲಾಲ್

DA   ¦    Jun 10, 2019 12:58:34 PM (IST)
 ಕಠಿಣ ಶ್ರಮ, ತಾಳ್ಮೆ ಇದ್ದರೆ ಕಲೆಯಲ್ಲಿ ಸಾಧಿಸಬಹುದು: ಅಶ್ವಿತ್ ಕುಲಾಲ್

ಬೆಳ್ತಂಗಡಿ: ಯಾವುದೇ ಕಲೆಯನ್ನು ಮೈಗೂಡಿಸಿಕೊಳ್ಳಬೇಕಾದರೆ ಕಠಿಣ ಪರಿಶ್ರಮ ಮತ್ತು ತಾಳ್ಮೆ ಅಗತ್ಯ. ಆಸಕ್ತಿಯ ಜತೆ ಛಲ ಇದ್ದರೆ ಕಲೆಯಲ್ಲಿ ಸಾಧನೆ ಮಾಡಬಹುದು. ಶಿಕ್ಷಣದಿಂದ ಉದ್ಯೋಗವಕಾಶ ಎಂಬ ಚಿಂತನೆ ಇಂದು ಬದಲಾಗಿದ್ದು, ಶಿಕ್ಷಣದ ಜತೆಗೆ ಸಂವಹನ ಸಾಮಾರ್ಥ್ಯವುಳ್ಳವರಿಗೆ ಮಾತ್ರ ಉದ್ಯೋಗದ ಅವಕಾಶ ಲಭಿಸುತ್ತಿದೆ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಉಪನ್ಯಾಸಕ ಅಶ್ವಿತ್ ಕುಲಾಲ್ ಹೇಳಿದರು.

ವೇಣೂರು ಕಲಾಕಾರ್ ಸಾಂಸ್ಕøತಿಕ ಕಲಾಸಂಸ್ಥೆಯಲ್ಲಿ ರವಿವಾರ ಜರಗಿದ ಪೋಷಕರ ಸಭೆಯಲ್ಲಿ ಅವರು ಮುಖ್ಯಅತಿಥಿಯಾಗಿ ಮಾತನಾಡಿದರು.

ಶಿಕ್ಷಣದಲ್ಲಿ ನಮ್ಮ ಜ್ಞಾನ ವೃದ್ಧಿ ಆಗಬೇಕಾದರೆ ಪಠ್ಯೇತರ ಚಟುವಟಿಕೆ ಅಗತ್ಯ. ಸಾಂಸ್ಕøತಿಕ ಸಂಸ್ಥೆಯನ್ನು ಕಟ್ಟಿಕೊಂಡು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಕಲಾಕಾರ್ ಕಾರ್ಯ ಶ್ಲಾಘನೀಯ ಎಂದರು.

ಮೂಡಬಿದಿರೆ ಮಹಾವೀರ ಕಾಲೇಜಿನ ಉಪನ್ಯಾಸಕಿ, ಕಿರುತೆರೆ ನಟಿ ಸುಜಾತ, ಝೀ ಕನ್ನಡ ಕಾಮಿಡಿ ರಾಕೇಶ್ ಉಡುಪಿ, ಕಲಾಕಾರ್‍ನ ಸಂಚಾಲಕ ರುತೇಶ್ ಗೌಡ, ಸದಸ್ಯರು, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು. ಪೋಷಕರ ಪರವಾಗಿ ಪ್ರಭಾಕರ ಪ್ರಭು ಮಾತನಾಡಿದರು.

ಕಾಲಾಕಾರ್ ಇದರ ಸ್ಥಾಪಕ ಸಂಚಾಲಕ ಕಾಮಿಡಿ ಕಿಲಾಡಿ ಅನೀಶ್ ಅಮೀನ್ ವೇಣೂರು ಪ್ರಾಸ್ತಾವಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕಲಾಕಾರ್ ಇದರ ಕಾರ್ಯದರ್ಶಿ ದೀಪಕ್ ಆಚಾರ್ಯ ಸ್ವಾಗತಿಸಿ, ಪ್ರಣೀತ್ ಜೈನ್ ವಂದಿಸಿದರು. ಇದೇ ಸಂದರ್ಭದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.