27ರಂದು ಫೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ

27ರಂದು ಫೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ

YK   ¦    Jul 13, 2019 05:15:33 PM (IST)
27ರಂದು ಫೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ

ಬಹುನಿರೀಕ್ಷಿತ ನಟ ಸುದೀಪ್ ಅಭಿನಯದ ಫೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ ಇದೇ 27ರಂದು ಚಿತ್ರದುರ್ಗದಲ್ಲಿ ನಡೆಯಲಿದೆ. 

ಎಲ್ಲವೂ ಅಂದುಕೊಡಂತೆ ಆದರೆ ಆಗಸ್ಟ್ ಮೊದಲ ವಾರದಲ್ಲಿ ಫೈಲ್ವಾನ್ ಚಿತ್ರ ಬಿಡುಗಡೆಯಾಗಲಿದೆ. ಚಿತ್ರ 8ಭಾಷೆಗಳಲ್ಲಿ ಸಿದ್ದವಾಗಿದ್ದು ಲಹರಿ ಸಂಸ್ಥೆಯು ಆಡಿಯೋ ಹಕ್ಕನ್ನು ಖರೀದಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ನಿರ್ದೇಶಕ ಕೃಷ್ಣ, ‘ಲಹರಿ ಸಂಸ್ಥೆಯು ಆಡಿಯೋ ಹಕ್ಕು ಖರೀದಿಸಿದೆ. ಆಡಿಯೋ ಬಿಡುಗಡೆಯ ಬಳಿಕ ಎಲ್ಲ ಭಾಷೆಗಳಲ್ಲೂ ಟ್ರೇಲರ್ ಗಳನ್ನು ಬಿಡುಗಡೆ ಮಾಡಲಾಗುವುದು. ಇದಕ್ಕೆ ನಿಮ್ಮೆಲ್ಲರ ಪ್ರೀತಿ, ಸಹಕಾರ ಇರಲಿ ಎಂದು ಬರೆದುಕೊಂಡಿದ್ದಾರೆ.