ಇದೇ 12 ರಂದು ‘ನರಗುಂದ ಬಂಡಾಯ’ ಚಿತ್ರ ತೆರೆಗೆ

ಇದೇ 12 ರಂದು ‘ನರಗುಂದ ಬಂಡಾಯ’ ಚಿತ್ರ ತೆರೆಗೆ

YK   ¦    Mar 03, 2020 11:04:09 AM (IST)
ಇದೇ 12 ರಂದು ‘ನರಗುಂದ ಬಂಡಾಯ’ ಚಿತ್ರ ತೆರೆಗೆ

ರಾಜ್ಯ ರೈತ ಹೋರಾಟದ ಕಥೆ ಆಧಾರಿತ ನರಗುಂದ ಬಂಡಾಯ ಚಿತ್ರವು ಮಾರ್ಚ್ 12ರಂದು ತೆರೆಗೆ ಬರಲಿದೆ. ಈ ಚಿತ್ರವನ್ನು ನಾಗೇಂದ್ರ ಮಾಗಡಿ ನಿರ್ದೇಶನ ಮಾಡಿದ್ದು, ಸಿದ್ದೇಶ ವಿರಕ್ತಮಠ ಅವರು ಚಿತ್ರಕಥೆ ಬರೆದು ನಿರ್ಮಾಣ ಮಾಡಿದ್ದಾರೆ.

ನಟ ಶಿವರಾಜ್ ಕುಮಾರ್ ಅವರು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.

ನಾಯಕಿ ಶುಭಾ ಪೂಂಜ ಅವರು ಗಟ್ಟಿಗಿತ್ತಿ ಹೆಣ್ಣು ಮಗಳ ಪಾತ್ರವನ್ನು ಹಾಗೂ ನಾಯಕ ರಕ್ಷ್ ಅವರು ವೀರಬ್ಬ ಬಸಪ್ಪ ಕಡ್ಲಿಕೊಪ್ಪ ಅವರ ಪಾತ್ರವನ್ನು ನಿಭಾಯಿಸಿದ್ದಾರೆ.