ತನುಶ್ರೀ ದತ್ತ ಮೇಲೆ ಲೈಂಗಿಕ ಕಿರುಕುಳ ಪ್ರಕರಣ: ನಾನಾ ಪಾಟೇಕರ್ ಗೆ ಕ್ಲೀನ್ ಚಿಟ್

ತನುಶ್ರೀ ದತ್ತ ಮೇಲೆ ಲೈಂಗಿಕ ಕಿರುಕುಳ ಪ್ರಕರಣ: ನಾನಾ ಪಾಟೇಕರ್ ಗೆ ಕ್ಲೀನ್ ಚಿಟ್

HSA   ¦    Jun 13, 2019 04:35:41 PM (IST)
ತನುಶ್ರೀ ದತ್ತ ಮೇಲೆ ಲೈಂಗಿಕ ಕಿರುಕುಳ ಪ್ರಕರಣ: ನಾನಾ ಪಾಟೇಕರ್ ಗೆ ಕ್ಲೀನ್ ಚಿಟ್

ಮಹಾರಾಷ್ಟ್ರ: ಮೀ ಟೂ ಅಭಿಯಾನದಲ್ಲಿ ನಟಿ ತನುಶ್ರೀ ದತ್ತ ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನಟ ನಾನಾ ಪಾಟೇಕರ್ ಗೆ ಕ್ಲೀನ್ ಚಿಟ್ ನೀಡಲಾಗಿದೆ.

ವರದಿಯೊಂದರ ಪ್ರಕಾರ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೆ ಇರುವ ಕಾರಣದಿಂದಾಗಿ ಮುಂಬಯಿ ಪೊಲೀಸರು ಬಿ ರಿಪೋರ್ಟ್ ದಾಖಲಿಸಿದ್ದಾರೆ.

ನಾನಾ ವಿರುದ್ಧದ ಆರೋಪದಲ್ಲಿ ಯಾವುದೇ ಸಾಕ್ಷ್ಯಗಳು ದೊರೆತಿಲ್ಲ ಎಂದು ಅಂಧೇರಿ ಕೋರ್ಟ್ ಗೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿರುವುದಾಗಿ ವರದಿಗಳು ಹೇಳಿವೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ತನುಶ್ರೀ ದತ್ತ ವಕೀಲರಾದ ನಿತಿನ್, ನಮಗೆ ಈ ಬಗ್ಗೆ ಮಾಹಿತಿಯಿಲ್ಲ, ಪ್ರಕರಣದ ಮುಚ್ಚಿದ್ದರೆ ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.