ದೇಹದಾರ್ಢ್ಯ ಸ್ಪರ್ಧೆ ವೇಳೆ ಸ್ಪರ್ಧಿ ಮೇಲೆ ಹಲ್ಲೆ: ದುನಿಯಾ ವಿಜಯ್ ವಶಕ್ಕೆ

ದೇಹದಾರ್ಢ್ಯ ಸ್ಪರ್ಧೆ ವೇಳೆ ಸ್ಪರ್ಧಿ ಮೇಲೆ ಹಲ್ಲೆ: ದುನಿಯಾ ವಿಜಯ್ ವಶಕ್ಕೆ

YK   ¦    Sep 23, 2018 10:09:03 AM (IST)
ದೇಹದಾರ್ಢ್ಯ ಸ್ಪರ್ಧೆ ವೇಳೆ ಸ್ಪರ್ಧಿ ಮೇಲೆ ಹಲ್ಲೆ: ದುನಿಯಾ ವಿಜಯ್ ವಶಕ್ಕೆ

ಬೆಂಗಳೂರು: ಶನಿವಾರ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆಯುತ್ತಿದ್ದ ವೇಳೆ ಸ್ಪರ್ಧಿ ಮಾರುತಿ ಗೌಡ ಅವರ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಅಪಹರಣ ಮಾಡಿದ್ದ ಆರೋಪದಡಿಯಲ್ಲಿ ಚಿತ್ರನಟ ದುನಿಯಾ ವಿಜಯ್ ಸೇರಿದಂತೆ ನಾಲ್ಕು ಮಂದಿಯನ್ನು ಹೈಗ್ರೌಂಡ್ಸ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶನಿವಾರ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಡೆದ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಮಂದಿ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ವಿಜಯ್, ‘ಎಲ್ಲೋ ನಿಮ್ಮ ಕಿಟ್ಟಿ’ ಎಂದು ಏಕವಚನದಲ್ಲಿ ಮಾರುತಿ ಅವರನ್ನು ಪ್ರಶ್ನೆ ಮಾಡಿದ್ದರು. ಸರಿಯಾಗಿ ಪ್ರತಿಕ್ರಿಯಿಸದಿದ್ದಾಗ ಸಹಚರರೊಂದಿಗೆ ಸೇರಿ ಅವರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.