ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿಗೆ 44ರ ಹುಟ್ಟು ಹಬ್ಬದ ಸಂಭ್ರಮ

ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿಗೆ 44ರ ಹುಟ್ಟು ಹಬ್ಬದ ಸಂಭ್ರಮ

YK   ¦    Jun 08, 2019 03:07:49 PM (IST)
ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿಗೆ 44ರ ಹುಟ್ಟು ಹಬ್ಬದ ಸಂಭ್ರಮ

ನವದೆಹಲಿ: ಬಾಲಿವುಡ್ ನಟಿ, ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ಅವರು ಇಂದು 44ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

44ರ ಹರೆಯದಲ್ಲೂ ಈಗಲೂ ಬಳುಕುವ ಬಳ್ಳಿಯಂತೆಯಿರುವ ಶಿಲ್ಪಾಶೆಟ್ಟಿ ಅವರು ಯೋಗದ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.

ಇವರಿಗೆ ಬಾಲಿವುಡ್ ನಟರು ಸೇರಿದಂತೆ ಅಭಿಮಾನಿ ಬಳಗದವರು ಟ್ವಿಟರ್ ನಲ್ಲಿ ಶುಭಕೋರಿದ್ದಾರೆ. ಪತಿ ರಾಜ್ ಕುಂದ್ರಾ ಅವರು ಪತ್ನಿಗೆ ಹುಟ್ಟುಹಬ್ಬದ ಶುಭಕೋರಿ ಪ್ರೀತಿಯ ಮಾತುಗಳನ್ನು ಬರೆದುಕೊಂಡಿದ್ದಾರೆ. ಶಿಲ್ಪಾ ಅವರು 2009ರಲ್ಲಿ ರಾಜ್ ಅವರನ್ನು ವಿವಾಹವಾದರು. ಈ ದಂಪತಿಗೆ 7ವರ್ಷದ ಮಗ ಇದ್ದಾನೆ.