ಬಿಗ್ ಬಾಸ್ ಖ್ಯಾತಿಯ ಅಜಝ್ ಖಾನ್ ಪೊಲೀಸ್ ವಶಕ್ಕೆ

ಬಿಗ್ ಬಾಸ್ ಖ್ಯಾತಿಯ ಅಜಝ್ ಖಾನ್ ಪೊಲೀಸ್ ವಶಕ್ಕೆ

HSA   ¦    Jul 19, 2019 04:36:17 PM (IST)
ಬಿಗ್ ಬಾಸ್ ಖ್ಯಾತಿಯ ಅಜಝ್ ಖಾನ್ ಪೊಲೀಸ್ ವಶಕ್ಕೆ

ಮುಂಬಯಿ: ಬಿಗ್ ಬಾಸ್ ಖ್ಯಾತಿಯ ಅಜಝ್ ಖಾನ್ ಅವರನ್ನು ಟಿಕ್ ಟಾಕ್ ನಲ್ಲಿ ಆಕ್ಷೇಪಾರ್ಹ ವಿಡಿಯೋ ಹಾಕಿದ ಪರಿಣಾಮ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಂಬಯಿ ಪೊಲೀಸರು ಗುರುವಾರ ಅಜಝ್ ಖಾನ್ ನ್ನು ಬಂಧಿಸಿ ಶುಕ್ರವಾರ ಕೋರ್ಟ್ ಗೆ ಹಾಜರುಪಡಿಸಿದ್ದರು.

ಈ ವಿಡಿಯೋವು ಕೋಮು ವಿರೋಧಿಯಾಗಿದ್ದು, ಇದರ ಕಾರಣ ಐಪಿಸಿ ಸೆಕ್ಷನ್ 153ಎ ಸೆಕ್ಷನ್ 34 ಮತ್ತು ಸೆಕ್ಷನ್ 67 ಪ್ರಕಾರ ಅಯಾಜ್ ಖಾನ್ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ಬಂದ ಹಿನ್ನೆಲೆಯಲ್ಲಿ ಅಯಾಜ್ ಖಾನ್ ನ್ನು ಬಂಧಿಸಲಾಗಿದೆ ಎಂದು ಮುಂಬಯಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.