ಸ್ಯಾಂಡಲ್‍ವುಡ್‍ನಲ್ಲಿ ಮಿಂಚುತ್ತಿರುವ ರಚಿತಾ ಪ್ರಸಾದ್

ಸ್ಯಾಂಡಲ್‍ವುಡ್‍ನಲ್ಲಿ ಮಿಂಚುತ್ತಿರುವ ರಚಿತಾ ಪ್ರಸಾದ್

LK   ¦    Oct 06, 2018 02:09:15 PM (IST)
ಸ್ಯಾಂಡಲ್‍ವುಡ್‍ನಲ್ಲಿ ಮಿಂಚುತ್ತಿರುವ ರಚಿತಾ ಪ್ರಸಾದ್

ಸೀರಿಯಲ್ ಮೂಲಕ ಸ್ಯಾಂಡಲ್ ವುಡ್‍ಗೆ ಕಾಲಿಟ್ಟು ಬೇಡಿಕೆ ನಟಿಯಾಗಿರುವ ರಚಿತಾರಾಮ್ ಇದೀಗ ವಿಭಿನ್ನ ಪಾತ್ರವೊಂದನ್ನು ಒಪ್ಪಿಕೊಂಡಿದ್ದಾರಂತೆ. ಮಹಿಳಾ ಪ್ರಧಾನ ಕಥಾನಕ ಹೊಂದಿರೋ ಈ ಚಿತ್ರದಲ್ಲಿ ರಚಿತಾ ಏಪ್ರಿಲ್ ಡಿಸೋಜಾ ಎಂಬ ಹೆಣ್ಣೊಬ್ಬಳ ಪಾತ್ರಕ್ಕೆ ಜೀವ ತುಂಬಿದ್ದಾರಂತೆ. ಈ ಪಾತ್ರ ಅವರು ಇದುವರೆಗೆ ಮಾಡಿರುವ ಅಭಿನಯಕ್ಕಿಂತ ವಿಭಿನ್ನವಾಗಿದೆಯಂತೆ.

ಹಾಗೆ ನೋಡಿದರೆ ರಚಿತಾ ರಾಮ್ ಏಕಾಏಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸುತ್ತಾರೆ ಎಂದಾಗ ಎಲ್ಲರೂ ಅಚ್ಚರಿಗೊಂಡಿದ್ದರು. ಆದರೆ ಅಲ್ಲಿ ನಟಿಸಿ ಸೈ ಎನಿಸಿಕೊಂಡ ಅವರು ಇದುವರೆಗೆ ಬೇಡಿಕೆ ನಟಿಯಾಗಿಯೇ ಮುಂದುವರೆಯುತ್ತಿದ್ದಾರೆ. ಜತೆಗೆ ಕೈ ತುಂಬಾ ಅವಕಾಶಗಳಿವೆ. ಈ ಸಮಯದಲ್ಲಿಯೇ ಅವರಿಗೆ ಈ ಅಪರೂಪದ ಪಾತ್ರ ಸಿಕ್ಕಿದ್ದು ಅದಕ್ಕೆ ಜೀವ ತುಂಬಿದ್ದಾರೆ.

ಕಮರ್ಷಿಯಲ್ ಹೀರೋಯಿನ್ ಎಂಬ ಇಮೇಜನ್ನು ಬ್ರೇಕ್ ಮಾಡಿಕೊಂಡು ಬೇರೆ ಥರದಲ್ಲಿಯೂ ಗುರುತಿಸಿಕೊಳ್ಳುವ ಬಯಕೆ ಅವರಲ್ಲಿ ಬಹು ಹಿಂದೆಯೇ ಇತ್ತು. ಅದು ಈಗ ಈಡೇರುವ ಕಾಲ ಬಂದಿದೆ ಎನ್ನುತ್ತಾರೆ ಅವರು.

ಇದೆಲ್ಲದರ ನಡುವೆ ಅವರ ನಸೀಬು ಬದಲಾಯಿಸಿದ್ದು, ಶಿವಣ್ಣನ ರುಸ್ತುಂ ಚಿತ್ರದಲ್ಲಿ ವಿವೇಕ್ ಓಬೇರಾಯ್ ಅವರಿಗೆ ಜೋಡಿಯಾಗಿ ನಟಿಸುತ್ತಿರೋ ರಚಿತಾ, ಪಿ ವಾಸು ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರಿಗೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದಲ್ಲಿಯೂ ಕೂಡಾ ರಚಿತಾರದ್ದು ಪಕ್ಕಾ ಸವಾಲಿನ ಪಾತ್ರವಂತೆ. ಒಟ್ಟಾರೆ ರಚಿತಾ ಪ್ರಸಾದ್ ಅವರು ಸ್ಯಾಂಡಲ್‍ವುಡ್‍ನಲ್ಲಿ ಮಿಂಚುತ್ತಿದ್ದು ಭರವಸೆಯ ನಟಿಯಾಗಿ ಗಮನಸೆಳೆಯುತ್ತಿದ್ದಾರೆ.