ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದ ದಿಗಂತ್- ಐಂದ್ರಿತಾ

ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದ ದಿಗಂತ್- ಐಂದ್ರಿತಾ

YK   ¦    Dec 11, 2018 05:33:27 PM (IST)
ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದ ದಿಗಂತ್- ಐಂದ್ರಿತಾ

ಬೆಂಗಳೂರು: ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ನಟ ದಿಂಗತ್ ಹಾಗೂ ನಟಿ ಐಂದ್ರಿತಾ ರೇ ಅವರ ಮದುವೆ ಡಿ.12ರಂದು ನಂದಿಬೆಟ್ಟದ ಡಿಸ್ಕವರಿ ವಿಲೇಜ್ ನಲ್ಲಿ ನಡೆಯಲಿದೆ. ಇಂದು ಸಂಜೆ ಮದುಮಕ್ಕಳು ಅರಿಶಿನ ಶಾಸ್ತ್ರ ಸಂಭ್ರಮದಲ್ಲಿ ಮುಳುಗೆದ್ದರು. 

ಈಗಾಗಲೇ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದ್ದು ಸಂಜೆ ಸಂಗೀತ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಅರಿಶಿನ ಶಾಸ್ತ್ರದ ಚಿತ್ರಗಳನ್ನು ದಿಗಂತ್ ಮತ್ತು ಐಂದ್ರಿತಾ ಇಬ್ಬರೂ ಶೇರ್ ಚಾಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಲ್ಲದೆ ಹರಿಶಿನ ಶಾಸ್ತ್ರದಲ್ಲಿ ಪಾಲ್ಗೊಳ್ಳುವ ಮುನ್ನಾ ವಿಡಿಯೋ ಮಾಡಿದ ದಿಗಂತ್- ಐಂದ್ರಿತಾ, ‘ಇನ್ನೇನು ಕೆಲವೇ ಕ್ಷಣಗಳಲ್ಲಿ ನಾವು ಮದುವೆಯಾಗುತ್ತಿದ್ದೇವೆ. ನಿಮ್ಮ ಆಶೀರ್ವಾದವಿರಲಿ ಎಂದು ಕೋರಿಕೊಂಡ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ’.

ಅರಿಶಿನ ಶಾಸ್ತ್ರಕ್ಕೆ ನಟ ರಕ್ಷಿತ್ ಶೆಟ್ಟಿ, ನಟಿ ಶರ್ಮಿಳಾ ಮಾಂಡ್ರೆ,ಪ್ರೇಮಾ ಸೇರಿದಂತೆ ಹಲವು ಮಂದಿ ಭಾಗಿಯಾಗಿದ್ದರು.