ಕಾಲೇಜ್ ಕುಮಾರ್ ಚಿತ್ರದ ಟೈಟಲ್ ಸಾಂಗ್ ಹಾಡಿದ ಸಂಚಿತ್ ಹೆಗಡೆ

ಕಾಲೇಜ್ ಕುಮಾರ್ ಚಿತ್ರದ ಟೈಟಲ್ ಸಾಂಗ್ ಹಾಡಿದ ಸಂಚಿತ್ ಹೆಗಡೆ

Oct 11, 2017 01:25:09 PM (IST)
ಕಾಲೇಜ್ ಕುಮಾರ್ ಚಿತ್ರದ ಟೈಟಲ್ ಸಾಂಗ್ ಹಾಡಿದ ಸಂಚಿತ್ ಹೆಗಡೆ

ಝೀ ವಾಹಿನಿಯ ಸರಿಗಮಪದ ಮೂಲಕ ರಾಜ್ಯದ ಸಂಗೀತ ಪ್ರಿಯರ ಮನಗೆದ್ದ ಸಂಚಿತ್ ಹೆಗಡೆಗೆ ಅವಕಾಶಗಳು ಅರಸಿ ಬರುತ್ತಿದ್ದು, ಆ ಕಾರ್ಯಕ್ರಮದ ಜಡ್ಜ್ ಆಗಿದ್ದಂತಹ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಮ್ಮ ಚಿತ್ರಗಳಲ್ಲಿ ಅವರಿಗೆ ಹಾಡಲು ಅವಕಾಶ ಮಾಡಿಕೊಟ್ಟಿರುವ ಕಾರಣದಿಂದಾಗಿ ಭವಿಷ್ಯದಲ್ಲಿ ಬೇಡಿಕೆಯ ಗಾಯಕನಾಗುವ ಎಲ್ಲ ಲಕ್ಷಣಗಳು ಕಂಡು ಬರತೊಡಗಿದೆ.

ಇದೀಗ ಎಂ.ಆರ್.ಪಿಕ್ಚರ್ಸ್ ಲಾಂಛನದಲ್ಲಿ ಎಲ್.ಪದ್ಮನಾಭ್ ಅವರು ನಿರ್ಮಿಸುತ್ತಿರುವ, ಹರಿ ಸಂತೋಷ್(ಅಲೆಮಾರಿ ಸಂತು) ನಿರ್ದೇಶನದ `ಕಾಲೇಜ್ ಕುಮಾರ್ ಚಿತ್ರದ ಟೈಟಲ್ ಸಾಂಗ್ ನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಸಂಚಿತ್ ಹೆಗಡೆಗೆ ಹಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

ಈ ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ ಪ್ರತಿಯೊಂದು ಹಾಡನ್ನು ಕೂಡ ವಿವಿಧ ಕಾಲೇಜುಗಳಲ್ಲಿ ಕಿಕ್ಕಿರಿದು ತುಂಬಿದ್ದ ವಿದ್ಯಾರ್ಥಿಗಳ ನಡುವೆ ಬಿಡುಗಡೆ ಮಾಡುವುದಾಗಿದ್ದು, ಅದರಂತೆ ಮಾಗಡಿ ರಸ್ತೆಯ ಈಸ್ಟ್ವೆಸ್ಟ್ ಕಾಲೇಜಿನಲ್ಲಿ `ಕಾಲೇಜ್ ಕುಮಾರ್ ಚಿತ್ರದ ಟೈಟಲ್ ಹಾಡನ್ನು ಬಿಡುಗಡೆ ಮಾಡಲಾಗಿದೆ.

ಈ ಹಾಡನ್ನು ನಿರ್ದೇಶಕ ಹರಿ ಸಂತೋಷ್ ಬರೆದಿದ್ದರೆ, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸರಿಗಮಪ ಖ್ಯಾತಿಯ ಸಂಚಿತ್ ಹೆಗಡೆ ಹಾಡಿದ್ದಾರೆ. ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಹಾಡನ್ನು ಬಿಡುಗಡೆ ಮಾಡಿರುವುದು ಚಿತ್ರತಂಡದ ಸಾಧನೆಯಾಗಿದೆ. ಟೈಟಲ್ ಸಾಂಗ್ ಬಿಡುಗಡೆ ಸಮಾರಂಭದಲ್ಲಿ ಸಂಗೀತ ನಿದರ್ೆಶಕ ಅಜರ್ುನ್ ಜನ್ಯ, ನಿಮರ್ಾಪಕ ಎಲ್.ಪದ್ಮನಾಭ್, ನಿದರ್ೆಶಕ ಹರಿ ಸಂತೋಷ್, ನಾಯಕ ವಿಕ್ಕಿ ವರುಣ್ ಹಾಗೂ ಗಾಯಕ ಸಂಚಿತ್ ಹೆಗಡೆ ಭಾಗವಹಿಸಿದ್ದರು.

ಚಿತ್ರದಲ್ಲಿ ವಿಕ್ಕಿ ವರುಣ್, ಸಂಯುಕ್ತ ಹೆಗಡೆ, ರವಿಶಂಕರ್, ಶ್ರುತಿ, ಪ್ರಕಾಶ್ ಬೆಳವಾಡಿ, ಸಾಧುಕೋಕಿಲ, ಅಚ್ಯುತ ಕುಮಾರ್ ನಟಿಸಿದ್ದರೆ, ಎ.ಅನಘನ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.