'ನಾತಿಚರಾಮಿ' ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ

'ನಾತಿಚರಾಮಿ' ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ

YK   ¦    Aug 09, 2019 04:38:26 PM (IST)
'ನಾತಿಚರಾಮಿ' ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ

ನವದೆಹಲಿ: ಪ್ರಸಕ್ತ ಸಾಲಿನ ರಾಷ್ಟ್ರೀಯ ಪ್ರಶಸ್ತಿಯು ಕನ್ನಡದ ನಾತಿಚರಾಮಿ ಚಲನಚಿತ್ರಕ್ಕೆ ಲಭಿಸಿದ್ದು ನಟಿ ಶೃತಿ ಹರಿಹರನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಶುಕ್ರವಾರ 2018ನೇ ಸಾಲಿನ 66ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು.

ಕೆಜಿಎಫ್ ಚಿತ್ರಕ್ಕೆ ಅತ್ಯುತ್ತಮ ಆಕ್ಷನ್ ನಿರ್ದೇಶನದ ಚಿತ್ರ ಎಂದು ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿ ಲಭಿಸಿದ ಸಿನಿಮಾಗಳುರಾಷ್ಟ್ರೀಯ ಕತೆ: ಒಂದಲ್ಲಾ ಎರಡಲ್ಲಾ


ಅತ್ಯುತ್ತಮ ಮಕ್ಕಳ ಚಿತ್ರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು
ಅತ್ಯುತ್ತಮ ಪ್ರಾದೇಶಿಕ ಚಿತ್ರ: ನಾತಿಚರಾಮಿ
ಅತ್ಯುತ್ತಮ ಮಹಿಳಾ ಗಾಯಕಿ: ನಾತಿಚರಾಮಿ
ಅತ್ಯುತ್ತಮ ಸಾಹಿತ್ಯ: ನಾತಿಚರಾಮಿ
ಅತ್ಯುತ್ತಮ ಸಂಕಲನ: ನಾತಿಚರಾಮಿ
ಅತ್ಯುತ್ತಮ ನಟಿ: ಶೃತಿ ಹರಿಹರನ್
ಅತ್ಯುತ್ತಮ ವಿಎಫ್ ಎಕ್ಸ್: ಕೆಜಿಎಫ್
ಅತ್ಯುತ್ತಮ ಸಾಹಸ ನಿರ್ದೇಶನ: ಕೆಜಿಎಫ್
ರಾಷ್ಟ್ರೀಯ ಸಾಧಕರು: ಮೂಕಜ್ಜಿ