ನಕಲಿ ನೋಟು ಮುದ್ರಣ: ಕಿರುತೆರೆ ನಟಿ ಸಹಿತ ಎಂಟು ಮಂದಿ ಸೆರೆ

ನಕಲಿ ನೋಟು ಮುದ್ರಣ: ಕಿರುತೆರೆ ನಟಿ ಸಹಿತ ಎಂಟು ಮಂದಿ ಸೆರೆ

HSA   ¦    Jul 06, 2018 03:15:55 PM (IST)
ನಕಲಿ ನೋಟು ಮುದ್ರಣ: ಕಿರುತೆರೆ ನಟಿ ಸಹಿತ ಎಂಟು ಮಂದಿ ಸೆರೆ

ತಿರುವನಂತಪುರಂ: ಕಿರುತೆರೆ ನಟಿ, ಆಕೆಯ ತಾಯಿ ಮತ್ತು ಸೋದರಿಯನ್ನು ನಕಲಿ ನೋಟು ಮುದ್ರಣ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಮಲಯಾಳಂ ಕಿರುತೆರೆ ನಟಿ ಸೂರ್ಯ ಶಶಿಕುಮಾರ್, ಆಕೆಯ ತಾಯಿ ಹಾಗೂ ಸೋದರಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಟಿ ಸೂರ್ಯ ಮನೆಯಲ್ಲಿ ಪ್ರಿಂಟಿಂಗ್ ಮೆಷಿನ್ ಅನ್ನು ಜಪ್ತಿ ಮಾಡಲಾಗಿದೆ. ಸೂರ್ಯ, ಆಕೆಯ ತಾಯಿ ಮತ್ತು ಸೋದರಿಯನ್ನು ಬುಧವಾರ ಬಂಧಿಸಲಾಗಿತ್ತು. ಗುರುವಾರ ಇದಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ ಎಂಟಕ್ಕೇರಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎರಡು ಲಕ್ಷ ರೂಪಾಯಿ ನಕಲಿ ನೋಟುಗಳು, ಕಾಗದ, ಪ್ರಿಂಟರ್ಸ್ ಮತ್ತು ನಕಲಿ ನೋಟುಗಳಿಗೆ ಉಪಯೋಗಿಸುವ ಬಣ್ಣ ಹಾಗೂ ಇನ್ನಿತರ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.