ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಬರಬೇಕು: ದರ್ಶನ್

ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಬರಬೇಕು: ದರ್ಶನ್

MY   ¦    Jan 17, 2018 02:20:28 PM (IST)
ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಬರಬೇಕು: ದರ್ಶನ್

ಮೈಸೂರು: ಹೊಸ ಪ್ರತಿಭೆಗಳು ಕನ್ನಡ ಚಿತ್ರ ರಂಗಕ್ಕೆ ಬರಬೇಕು. ನೃತ್ಯ, ಫೈಟ್ ಎಲ್ಲವನ್ನೂ ಕಲಿತ್ತಿದ್ದೇವೆ ಎಂದು ಸಾಕಷ್ಟು ಜನ ಹೇಳುತ್ತಾರೆ. ಆದರೆ ಅವರಲ್ಲಿ ಅಭಿನಯವೇ ಇರುವುದಿಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ವೆನಿಲ್ಲಾ ಆಡಿಯೋ ಬಿಡುಗಡೆ ಸಂಧರ್ಭದಲ್ಲಿ ಹೇಳಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಹೊಸ ನಟ, ನಟಿಯರನ್ನು ಒಳಗೊಂಡಿರುವ ವೆನಿಲ್ಲಾ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆಗೊಳಿಸಿದ ಚಿತ್ರಕ್ಕೆ ಹಾರೈಸಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಹೊಸ ಪ್ರತಿಭೆಗಳು ಕನ್ನಡ ಚಿತ್ರ ರಂಗಕ್ಕೆ ಬರಬೇಕು. ಇತ್ತೀಚೆಗೆ ನೃತ್ಯ, ಫೈಟ್ ಎಲ್ಲವನ್ನೂ ಕಲಿತ್ತಿದ್ದೇವೆ ಎಂದು ಸಾಕಷ್ಟು ಜನ ಹೇಳಿಕೊಂಡು ಸಿನಿಮಾ ರಂಗಕ್ಕೆ ಬರುತ್ತಾರೆ. ಆದರೆ ಮುಖ್ಯವಾಗಿ ಬೇಕಾದ ಅಭಿನಯವೇ ಅವರಲ್ಲಿ ಇರುವುದಿಲ್ಲ. ಆದ್ದರಿಂದ ಅಭಿನಯ ಕಲಿತೆರ ನೃತ್ಯ, ಫೈಟ್ ತನ್ನಿಂದ ತಾನೇ ಬರುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ರಂಗಭೂಮಿಯಿಂದ ಬಂದ ಕಲಾವಿದರು ಅಭಿನಯದ ಎಲ್ಲ ಆಯಾಮಗಳನ್ನು ಕಲಿತಿರುತ್ತಾರೆ. ಸಿನಿಮಾದಲ್ಲಿ ನಟಿಸಬೇಕೆಂದೇ ಅಭಿನಯ ಕಲಿತ ಮೈಸೂರಿನವರೇ ಆದ ಅವಿನಾಶ್, ಸ್ವಾತಿ ವೆನಿಲ್ಲಾ ಚಿತ್ರದ ಮೂಲಕ ಚಿತ್ರ ರಂಗಕ್ಕೆ ಬಂದಿರುವುದು ಸ್ವಾಗತಾರ್ಹ ಎಂದರು.

More Images