ಬೆಂಗಳೂರು ಪೊಲೀಸರಿಗೆ ವಿಡಿಯೋದಲ್ಲಿ ಧನ್ಯವಾದ ತಿಳಿಸಿದ ಸನ್ನಿ

ಬೆಂಗಳೂರು ಪೊಲೀಸರಿಗೆ ವಿಡಿಯೋದಲ್ಲಿ ಧನ್ಯವಾದ ತಿಳಿಸಿದ ಸನ್ನಿ

YK   ¦    Nov 04, 2018 04:30:56 PM (IST)
 ಬೆಂಗಳೂರು ಪೊಲೀಸರಿಗೆ ವಿಡಿಯೋದಲ್ಲಿ ಧನ್ಯವಾದ ತಿಳಿಸಿದ ಸನ್ನಿ

ಬೆಂಗಳೂರು: ಶನಿವಾರ ರಾತ್ರಿ ಬೆಂಗಳೂರಿನಲ್ಲಿ ನೃತ್ಯ ಕಾರ್ಯಕ್ರಮ ನೀಡಿದ್ದ ಬಾಲಿವುಡ್ ನ ಮೋಹಕ ಬೆಡಗಿ ಸನ್ನಿ ಲಿಯೋನ್ ಅವರು ಇದೀಗ ಬೆಂಗಳೂರು ಪೊಲೀಸರಿಗೆ ವಿಡಿಯೋ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ನಟಿ ಸನ್ನಿ ಲಿಯೋನ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿ ಬೆಂಗಳೂರು ಪೊಲೀಸರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕನ್ನಡ ಸಂಘಟನೆಗಳ ಭಾರೀ ವಿರೋಧದ ನಡುವೆಯೂ ಪೊಲೀಸ್ ಬಿಗಿ ಬಂದೋಬಸ್ತ್ ನೊಂದಿಗೆ ಶನಿವಾರ ಸನ್ನಿ ಲಿಯೋನ್ ನೃತ್ಯ ಕಾರ್ಯಕ್ರಮವನ್ನು ನೀಡಿದ್ದರು.

ಭಾನುವಾರ ಸನ್ನಿ ಲಿಯೋನ್ ಅವರು ಬೆಂಗಳೂರು ನಗರ ಪೊಲೀಸರು ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಜತೆಗೆ ಬಾಲಿವುಡ್ ನಲ್ಲಿ ಭದ್ರತೆಯನ್ನು ನೀಡುವ ಯೂಸುಫ್ ಇಬ್ರಾಹಿಂ ಮತ್ತು ನನ್ನ ತಂಡದವರು ಕೂಡ ಹಾರ್ಡ್ ವರ್ಕ್ ಮಾಡಿದ್ದಾರೆ. ಅವರಿಗೆಲ್ಲ ನನ್ನ ಧನ್ಯವಾದಗಳು. ಬೆಂಗಳೂಋಉ ಜನರು ನೈಟ್ ಕಾರ್ಯಕ್ರಮದಲ್ಲಿ ಕೆಟ್ಟದಕ್ಕಿಂತ ಹೆಚ್ಚಾಗಿ ಒಳ್ಳೆಯ ರೀತಿ ನಡೆದುಕೊಂಡಿದ್ದಾರೆ, ಲವ್ ಯು' ಎಂದು ವಿಡಿಯೋ ಮಾಡಿ ಟ್ವೀಟ್ ಮಾಡಿದ್ದಾರೆ.