ಮುತ್ತಿನ ನಗರಿಯಲ್ಲಿ ನಾಗಚೈತನ್ಯ-ಸಮಂತಾ ಅದ್ಧೂರಿ ಆರತಕ್ಷತೆ

ಮುತ್ತಿನ ನಗರಿಯಲ್ಲಿ ನಾಗಚೈತನ್ಯ-ಸಮಂತಾ ಅದ್ಧೂರಿ ಆರತಕ್ಷತೆ

Nov 13, 2017 12:51:33 PM (IST)
ಮುತ್ತಿನ ನಗರಿಯಲ್ಲಿ ನಾಗಚೈತನ್ಯ-ಸಮಂತಾ ಅದ್ಧೂರಿ ಆರತಕ್ಷತೆ

ಹೈದರಾಬಾದ್: ಟಾಲಿವುಡ್ ನ ಕ್ಯೂಟ್ ಜೋಡಿ ನಾಗ ಚೈತನ್ಯ ಹಾಗೂ ಸಮಂತಾ ಅವರ ವಿವಾಹ ನಡೆದು ಈಗಾಗಲೇ ತಿಂಗಳುಗಳು ಕಳೆದಿವೆ.

ಒಂದು ತಿಂಗಳ ಬಳಿಕ ಈ ಜೋಡಿಯ ಆರತಕ್ಷತೆ ಮುತ್ತಿನ ನಗರಿ ಹೈದರಾಬಾದ್ ಅದ್ಧೂರಿ ನಡೆದಿದೆ. ಚಿತ್ರರಂಗದ ಗಣ್ಯರು ಭಾಗವಹಿಸಿಸಿ ನವ ಜೋಡಿಗೆ ಶುಭ ಹಾರೈಸಿದರು.

ಅಕ್ಟೋಬರ್ 6 ರಂದು ಈ ಜೋಡಿ ಗೋವಾದ ಡಬ್ಲ್ಯು ರೆಸಾರ್ಟ್ ನಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಈ ವೇಳೆ ಆಪ್ತ ಸ್ನೇಹಿತರಿಗೆ ಮತ್ತು ಕುಟಂಬ ವರ್ಗದವರಿಗೆ ಮಾತ್ರ ಆಹ್ವಾನಿಸಲಾಗಿತ್ತು.

ಆರತಕ್ಷತೆ ಕಾರ್ಯಕ್ರಮದಲ್ಲಿ ನಾಗಚೈತನ್ಯ ಸ್ನೇಹಿತ ನಟ ರಾಮಚರಣ್ ತೇಜ, ನಿರ್ದೇಶಕ ಎಸ್ಎಸ್ ರಾಜಮೌಳಿ, ನಂದಮೂರಿ ಹರಿಕೃಷ್ಣ, ನಟ ಚಿರಂಜೀವಿ, ವೆಂಕಟೇಶ್ ಸೇರಿದಂತೆ ಅನೇಕ ನಟರು ಶುಭಹಾರೈಸಿದರು.

 

More Images