ಶಾರ್ಟ್ ಸ್ಕರ್ಟ್ ನಲ್ಲಿ ರಾಧಿಕಾ ಕುಮಾರಸ್ವಾಮಿ ಗ್ಲಾಮರ್ ಲುಕ್

ಶಾರ್ಟ್ ಸ್ಕರ್ಟ್ ನಲ್ಲಿ ರಾಧಿಕಾ ಕುಮಾರಸ್ವಾಮಿ ಗ್ಲಾಮರ್ ಲುಕ್

YK   ¦    Sep 11, 2018 04:18:19 PM (IST)
ಶಾರ್ಟ್ ಸ್ಕರ್ಟ್ ನಲ್ಲಿ ರಾಧಿಕಾ ಕುಮಾರಸ್ವಾಮಿ ಗ್ಲಾಮರ್ ಲುಕ್

ಮದುವೆಯಾಗಿ ಮಗುವಾದ ಬಳಿಕವೂ ಫಿಟ್ ನೆಸ್ ಆಗಿ ಗ್ಲಾಮರ್ ನ್ನು ಎಳ್ಳಷ್ಟೂ ಕಳೆದುಕೊಳ್ಳದ ರಾಧಿಕಾ ಕುಮಾರಸ್ವಾಮಿ ಅವರು ಇದೀಗ ಮಾರ್ಡನ್ ಲುಕ್ ನಲ್ಲಿ ಮಿಂಚಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಫೋಟೋದಲ್ಲಿ ರಾಧಿಕಾ ಕಪ್ಪು ಬಣ್ಣದ ಟಾಪ್ ಹಾಗೂ ಶಾರ್ಟ್ ಸ್ಕರ್ಟ್ ಧರಿಸಿ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಯಾವ ಚಿತ್ರದ ಚಿತ್ರೀಕರಣ ವೇಳೆ ತೆಗೆದ ಫೋಟೋ ಎಂಬುದು ಖಚಿತವಾಗಿಲ್ಲ. ರಾಧಿಕಾ ಅವರಿಗೆ ಮದುವೆಯಾಗಿ ಮಗುವಾದರೂ ತನ್ನ ಗ್ಲಾಮರ ನ್ನೂ ಕಳೆದುಕೊಳ್ಳದೆ ಹಾಗೆಯೇ ಕಾಪಾಡಿಕೊಂಡು ಬಂದಿದ್ದಾರೆ.

ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದಿನಗಳಿಂದಲೂ ರಾಧಿಕಾ ಅವರು ತುಂಬಾ ಮುದ್ದಾಗಿಯೇ ಕಾಣಿಸಿಕೊಂಡಿದ್ದು, ಇದೀಗ ಗ್ಲಾಮರ್ ಲುಕ್ ನಲ್ಲಿ ಮತ್ತಷ್ಟು ಮಿಂಚುತ್ತಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಮತ್ತೇ ಮತ್ತೇ ಕಾಣಿಸಿಕೊಂಡಿರುವ ರಾಧಿಕಾ ಇದೀಗ ಕಾಂಟ್ರ್ಯಾಕ್ಟ್, ಭೈರಾದೇವಿ. ಜೇಂದ್ರ ಪೊನ್ನಪ್ಪ, ದಮಯಂತಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಚೆಗೆ ಜ್ಯುವೆಲ್ಸ್ ಆಫ್ ಇಂಡಿಯಾ ರಾಯಭಾರಿಯಾಗಿರುವ ರಾಧಿಕಾ ನೂತನ ವಿನ್ಯಾಸದ ಆಭರಣ ಧರಿಸಿ ಮಿಂಚಿದ್ದಾರೆ. ಗಣೇಶ ಹಬ್ಬದ ಪ್ರಯುಕ್ತ ಲಾಂಚ್ ಆಗಿರುವ ಈ ಹೊಸ ಬಗೆಯ ಆಭರಣಗಳನ್ನು ಪರಿಚಯಿಸಿದ್ದಾರೆ.