ಕೋಲಾರದಲ್ಲಿ ನಡೆಯುತ್ತಿದ್ದ ಕೆಜಿಎಫ್ 2 ಚಿತ್ರೀಕರಣಕ್ಕೆ ಮಧ್ಯಂತರ ತಡೆ

ಕೋಲಾರದಲ್ಲಿ ನಡೆಯುತ್ತಿದ್ದ ಕೆಜಿಎಫ್ 2 ಚಿತ್ರೀಕರಣಕ್ಕೆ ಮಧ್ಯಂತರ ತಡೆ

YK   ¦    Aug 27, 2019 07:10:39 PM (IST)
ಕೋಲಾರದಲ್ಲಿ ನಡೆಯುತ್ತಿದ್ದ ಕೆಜಿಎಫ್ 2 ಚಿತ್ರೀಕರಣಕ್ಕೆ ಮಧ್ಯಂತರ ತಡೆ

ಬೆಂಗಳೂರು: ನಟ ಯಶ್ ಅಭಿನಯದ ಕೆಜಿಎಫ್ 2 ಚಿತ್ರದ ಚಿತ್ರೀಕರಣಕ್ಕೆ ಕೋಲಾರ ಜೆಎಂಎಫ್ ಸಿ ಕೋರ್ಟ್ ಮಂಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.

ಕೆಜಿಎಫ್ 2 ಚಿತ್ರದ ಚಿತ್ರೀಕರಣವನ್ನು ಸೈನೈಡ್ ಗುಡ್ಡದಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಇಂತಹ ಶೂಟಿಂಗ್ ಗೆ ತಡೆ ನೀಡಬೇಕು. ಸೈನೈಡ್ ಗುಡ್ಡದಲ್ಲಿ ಶೂಟಿಂಗ್ ಗೆ ಅವಕಾಶ ನೀಡಬಾರದು ಎಂದು ಶ್ರೀನಿವಾಸ್ ಎಂಬವರು ಕೋಲಾರದ ಕೆಜಿಎಫ್ ನ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಸಿವಿಲ್ ಕೋರ್ಟ್ ಅರ್ಜಿಯನ್ನು ಪರಿಗಣಿಸಿ ಸೈನೈಡ್ ಗುಡ್ಡದಲ್ಲಿ ಕೆಜಿಎಫ್ ಚಿತ್ರದ ಶೂಟಿಂಗ್ ಗೆ ನಡೆಸದಂತೆ ತಡೆ ನೀಡಿ ಚಿತ್ರತಂಡಕ್ಕೆ ನೋಟೀಸ್ ಜಾರಿ ಮಾಡಿ. ಇದೀಗ ಸೈನೈಡ್ ಗುಡ್ಡದಲ್ಲಿ ನಡೆಸುತ್ತಿದ್ದ ಚಿತ್ರೀಕರಣಕ್ಕೆ ಬ್ರೇಕ್ ನೀಡಿದೆ.