ಕಾರು ಅಪಘಾತದಲ್ಲಿ ನನಗೆ ಏನೂ ಆಗಿಲ್ಲ: ನಟ ಪುನೀತ್ ರಾಜ್ ಕುಮಾರ್

ಕಾರು ಅಪಘಾತದಲ್ಲಿ ನನಗೆ ಏನೂ ಆಗಿಲ್ಲ: ನಟ ಪುನೀತ್ ರಾಜ್ ಕುಮಾರ್

YK   ¦    Jun 08, 2018 10:34:03 AM (IST)
ಕಾರು ಅಪಘಾತದಲ್ಲಿ ನನಗೆ ಏನೂ ಆಗಿಲ್ಲ: ನಟ ಪುನೀತ್ ರಾಜ್ ಕುಮಾರ್

ಬೆಂಗಳೂರು: ಗುರುವಾರ ರಾತ್ರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರಿನ ಟಯರ್ ಸ್ಫೋಟಗೊಂಡು ಅಪಘಾತಕ್ಕೀಡಾಗಿದ್ದು ನಟ ಪುನೀತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಳ್ಳಾರಿಯಲ್ಲಿ ಶೂಟಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಆಂಧ್ರ ಪ್ರದೇಶದ ಅನಂತಪುರ ಸಮೀಪದಲ್ಲಿ ಕಾರಿನ ಟಯರ್ ಬ್ಲಾಸ್ಟ್ ಆಗಿದೆ. ಇದರ ಪರಿಣಾಮ ಅಪಘಾತ ಸಂಭವಿಸಿದ್ದು ಕಾರಿಗೆ ಹಾನಿಯಾಗಿದ್ದು, ಕಾರಿನಲ್ಲಿದ್ದ ಪುನೀತ್ ಹಾಗೂ ಅವರ ಗನ್ ಮ್ಯಾನ್, ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಲ್ಲಿಂದ್ದ ಪುನೀತ ಸ್ನೇಹಿತರ ಕಾರಿನಲ್ಲಿ ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ. ಅಭಿಮಾನಿಗಳ ಈ ವಿಚಾರ ತಿಳಿಯುತ್ತಿದ್ದಂತೆಯೇ ಆತಂಕಕ್ಕೀಡಾಗಿದ್ದು ಇದಕ್ಕೇ ಕೂಡಲೇ ಪ್ರತಿಕ್ರಿಯಿಸಿದ ಪುನೀತ್ "ನನಗೆ ಏನೂ ಆಗಿಲ್ಲ. ಚೆನ್ನಾಗಿಯೇ ಇದ್ದೇನೆ. ಕಾರಿನ ಟಯರ್ ಸ್ಫೋಟಗೊಂಡಿದೆ ಅಷ್ಟೇ. ಯಾರಿಗೂ ಏನೂ ಆಗಿಲ್ಲ. ನನ್ನ ಬಗ್ಗೆ ಕಾಳಜಿ ತೋರಿದ್ದಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.