ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾದ ಸುಮಲತಾ

ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾದ ಸುಮಲತಾ

YK   ¦    Mar 16, 2019 10:42:22 AM (IST)
ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾದ ಸುಮಲತಾ

ಬೆಂಗಳೂರು: ಮುಂಬರು ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಕಣಕ್ಕಿಳಿಯಲು ನಿರ್ಧರಿಸಿರುವ ಸುಮಾಲತಾ ಅಂಬರೀಷ್ ಅವರು ಬಿಜೆಪಿ ನಾಯಕ ಎಸ್.ಕೃಷ್ಣ ಅವರನ್ನು ಶುಕ್ರವಾರ ಭೇಟಿ ಮಾಡಿದರು.

ಸದಾಶಿವನಗರದಲ್ಲಿರುವ ಕೃಷ್ಣ ಅವರ ನಿವಾಸಕ್ಕೆ ತೆರಳಿದ ಸುಮಲಾತ ಅವರು ಎಸ್.ಎಂ.ಕೃಷ್ಣ ಅವರ ಆಶೀರ್ವಾದ ಪಡೆದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ, ನನಗೆ ಯಾವುದೇ ಪಕ್ಷದ, ನಾಯಕರ ಬೆಂಬಲ ಇಲ್ಲ, ಮಂಡ್ಯದ ಜನರ ಪ್ರೀತಿಗೆ ಕಟ್ಟು ಬಿದ್ದು ರಾಜಕೀಯ ಕಣಕ್ಕಿಳಿಯುತ್ತಿದ್ದೇನೆ. ಕೃಷ್ಣ ಅವರು ಹಿರಿಯರು.

ಅವರ ಆಶೀರ್ವಾದ ಪಡೆದಿದ್ದು ಜಿಲ್ಲೆಯ ಸ್ಥಿತಿಯ ಬಗ್ಗೆ ತಿಳಿಸಿದ್ದೇನೆ ಎಂದರು.
ಎಸ್.ಎಂ ಕೃಷ್ಣ ಮಾತನಾಡಿ, 'ನಾನು ಬೇರೆಯಲ್ಲ, ಬಿಜೆಪಿ ಬೇರೆಯಲ್ಲ. ಬಿಜೆಪಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುತ್ತದೋ ಅದಕ್ಕೆ ನಾನು ಬದ್ಧ' ಎಂದರು.