ಗ್ರಾಮೀಣ ಸೊಗಡಿನಲ್ಲಿ ಮೂಡಿಬರಲಿದೆ ಕಾದಂಬರಿ ಆಧರಿತ 'ದನಗಳು' ಚಿತ್ರ

ಗ್ರಾಮೀಣ ಸೊಗಡಿನಲ್ಲಿ ಮೂಡಿಬರಲಿದೆ ಕಾದಂಬರಿ ಆಧರಿತ 'ದನಗಳು' ಚಿತ್ರ

LK   ¦    Mar 13, 2018 11:09:46 AM (IST)
ಗ್ರಾಮೀಣ ಸೊಗಡಿನಲ್ಲಿ ಮೂಡಿಬರಲಿದೆ ಕಾದಂಬರಿ ಆಧರಿತ 'ದನಗಳು' ಚಿತ್ರ

ಕೆ.ಆರ್.ಪೇಟೆ: ತಾಲೂಕಿನ ಮಂದಗೆರೆ ಗ್ರಾಮದ ಮಧು ಮಂದಗೆರೆ ಅವರು ನಾಯಕ ನಟರಾಗಿ ನಟಿಸುತ್ತಿರುವ ಸಂಪೂರ್ಣ ಗ್ರಾಮೀಣ ಸೊಗಡಿನ ಕಥೆಯನ್ನೊಳಗೊಂಡ ದನಗಳು ಚಿತ್ರದ ಚಿತ್ರೀಕರಣಕ್ಕೆ ಬಸವೇಸ್ವರ ದೇವಾಲಯದ ಆವರಣದಲ್ಲಿ ಚಾಲನೆ ನೀಡಲಾಯಿತು.

ಸಾಹಿತಿಗ ಬಿ.ಎಲ್.ವೇಣು ಅವರ ದನಗಳು ಕಾದಂಬರಿಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಸ್ವತಃ ವೇಣು ಅವರೇ ಚಿತ್ರಕಥೆ ರಚಿಸಿ ಸಂಭಾಷಣೆಯನ್ನು ಬರೆದಿದ್ದಾರೆ.

ಈ ವೇಳೆ ಮಾತನಾಡಿದ ನಟ ಮಧು ಮಂದಗೆರೆ ಅವರು ಕನ್ನಡಿಗರು ಕನ್ನಡ ಚಲನಚಿತ್ರಗಳನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿ ಸದಭಿರುಚಿಯ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರತಿಭೆಗಳು ಕನ್ನಡ ಚಿತ್ರೋದ್ಯಮವನ್ನು ಪ್ರವೇಶಿಸಿ ಸಮಾಜಕ್ಕೆ ಸಂದೇಶವನ್ನು ನೀಡುವ ಸದಭಿರುಚಿಯ ಚಿತ್ರಗಳನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಇದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ಪ್ರಶಂಸಿಸಿದ ಮಧು ಗೋವು ರೈತನ ಜೀವನಾಧಾರವಾದ ಪ್ರಾಣಿ, ಗೋವುಗಳ ಹತ್ಯೆ, ಕಳ್ಳ ಮಾರಾಟ ಮುಂತಾದ ವಸ್ತುವನ್ನಿಟ್ಟುಕೊಂಡು ನಮ್ಮ ತಾಲೂಕಿನ ಸುಂದರವಾದ ಪ್ರಕೃತಿಯ ರಮಣೀಯ ಸ್ಥಳಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗುತ್ತಿದೆ. ಸ್ಥಳೀಯ ಕಲಾವಿದರನ್ನೇ ಹೆಚ್ಚಾಗಿ ಈ ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ ಎಂದರು.

ತಾಲೂಕಿನ ಮಂದಗೆರೆ ಗ್ರಾಮದಲ್ಲಿ ಹುಟ್ಟು ಮಂದಗೆರೆಯಲ್ಲಿಯೇ ಬಾಲ್ಯದಲ್ಲಿ ವ್ಯಾಸಂಗ ಮಾಡಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಬಾಲ್ಯದಿಂದಲೂ ಚಲನಚಿತ್ರದಲ್ಲಿ ನಟಿಸಬೇಕೆಂಬ ಕನಸು ಹೊತ್ತಿದ್ದ ನನಗೆ ಚಿತ್ರದ ಚಿತ್ರಕಥೆಯು ಆಕರ್ಷಿಸಿತು. ಮಿತ್ರರಾದ ಬಾಲಾಜಿ ಪೋಳ್ ಅವರು ನಿಮರ್ಾಣ ಮಾಡಿ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಚಿತ್ರವು ಕನ್ನಡಿಗರ ಮನಸ್ಸನ್ನು ಗೆದ್ದು ಯಶಸ್ಸು ಕಾಣುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.