ಕುತೂಹಲ ಕೆರಳಿಸುತ್ತಿದೆ 'ಅನುಕ್ತ' ಚಿತ್ರದ ಟ್ರೈಲರ್

ಕುತೂಹಲ ಕೆರಳಿಸುತ್ತಿದೆ 'ಅನುಕ್ತ' ಚಿತ್ರದ ಟ್ರೈಲರ್

Jan 20, 2019 04:32:49 PM (IST)
ಕುತೂಹಲ ಕೆರಳಿಸುತ್ತಿದೆ 'ಅನುಕ್ತ' ಚಿತ್ರದ ಟ್ರೈಲರ್

ಘಟನೆಗಳ ಆಧಾರದ ಮೇಲೆ ಕಥೆಯನ್ನು ಹೆಣೆದು ಕನ್ನಡದಲ್ಲಿ 'ಅನುಕ್ತ' ಎಂಬ ಟೈಟಲ್ ಚಿತ್ರ ರೆಡಿಯಾಗುತ್ತಿದೆ. ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಕುತೂಹಲವನ್ನು ಹೆಚ್ಚಿಸುತ್ತಿದೆ.   

ಈ ಚಿತ್ರವನ್ನು ನಿರ್ದೇಶನ ಮಾಡಿರೋ ಅಶ್ವಥ್ ಸ್ಯಾಮ್ಯುಯಲ್ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎನ್ನುತ್ತಿದ್ದಾರೆ. ಚಿತ್ರದ ಟ್ರೈಲರ್ ನ್ನು ಶನಿವಾರ ಬಿಡುಗಡೆ ಮಾಡಿದ್ದು ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ.  

ಸಸ್ಪೆನ್ಸ್ ಥ್ರಿಲ್ ಹಾಗೂ ಪತ್ತೆದಾರಿ ಮಾದರಿಯಲ್ಲಿ ಚಿತ್ರದ ಕಥೆ ನಿರೂಪಣೆಗೊಂಡಿರುವುದರಿಂದ ಪ್ರೇಕ್ಷಕರಿಗೆ ಒಂದು ಮಜವಾದ ಅನುಭವವನ್ನು ನೀಡುವುದರಲ್ಲಿ ಅನುಮಾನವಿಲ್ಲ. ಈ ಚಿತ್ರದ ಚಿತ್ರೀಕರಣಕ್ಕಾಗಿ ಬ್ರಹ್ಮಾವರದಲ್ಲಿರುವ ಸುಮಾರು ಐನೂರು ವರುಷದ ಪುರಾತನ ಮನೆಯನ್ನು ಉಪಯೋಗಿಸಿಕೊಂಡಿದ್ದಾರೆ ಹಾಗು ಕರಾವಳಿಯ ವಿವಿಧ ಭಾಗ ಮತ್ತು ಬೆಂಗಳೂರಿನಲ್ಲೂ ಕೂಡ ಚಿತ್ರೀಕರಣವನ್ನು ಮಾಡಲಾಗಿದೆ.

ಇನ್ನು ಅನುಕ್ತ ಚಿತ್ರಕ್ಕೆ ಕಾರ್ತಿಕ್ ಅತ್ತಾವರ ಕಥೆಯನ್ನು ಬರೆದಿದ್ದು ಜೊತೆಗೆ ಚಿತ್ರದ ನಾಯಕನಾಗಿಯು ಅಭಿನಯಿಸಿದ್ದಾರೆ. ನಾಯಕಿಯಾಗಿ ಸಂಗೀತಾ ಭಟ್ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಅನುಪ್ರಭಾಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಭಾಷ ನಟ ಸಂಪತ್ ರಾಜ್ ಕೂಡ ಅಭಿನಯಿಸಿದ್ದಾರೆ.

ಚಿತ್ರದ ಹಾಡುಗಳಿಗೆ ನೋಬಿಲ್ ಪೌಲ್ ಸಂಗೀತಾ ನೀಡಿದ್ದು ಉಡುಪಿ ಮೂಲದ ದುಬೈ ಉದ್ಯಮಿ ಹರೀಶ್ ಬಂಗೇರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಫೆಬ್ರವರಿ 1ರಂದು ರಾಜ್ಯ, ಹೊರರಾಜ್ಯ ಮತ್ತು ವಿದೇಶಗಳಲ್ಲೂ ಚಿತ್ರ ತೆರೆ ಕಾಣಲಿದೆ. ಒಟ್ಟಾರೆ ತೆರೆಗೆ ಬರೋದಕ್ಕೂ ಮುನ್ನವೆ ಸಿನಿಪ್ರಿಯರಲ್ಲಿ ಒಂದಷ್ಟು ಕುತೂಹಲ ಮತ್ತು ಭರವಸೆಯನ್ನು ಮೂಡಿಸಿರುವ "ಅನುಕ್ತ" ತೆರೆಯ ಮೇಲೆ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮನ ಗೆಲ್ಲಲಿದೆ ಅನ್ನೋದು ಕಾಯಬೇಕಾಗಿದೆ.