ಶ್ರೀರಾಮುಲು ಪರ ಪ್ರಚಾರದ ವೇಳೆ ಕಿಚ್ಚ ಸುದೀಪ್ ಕೈಗೆ ಗಾಯ

ಶ್ರೀರಾಮುಲು ಪರ ಪ್ರಚಾರದ ವೇಳೆ ಕಿಚ್ಚ ಸುದೀಪ್ ಕೈಗೆ ಗಾಯ

YK   ¦    May 07, 2018 04:38:08 PM (IST)
ಶ್ರೀರಾಮುಲು ಪರ ಪ್ರಚಾರದ ವೇಳೆ ಕಿಚ್ಚ ಸುದೀಪ್ ಕೈಗೆ ಗಾಯ

ಮೊಳಕಾಲ್ಮೂರು: ನಟ ಕಿಚ್ಚ ಸುದೀಪ್ ಇಂದು ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಪರ ಮತ ಪ್ರಚಾರ ಕೈಗೊಂಡ ವೇಳೆ ಜನರ ಮಧ್ಯೆ ನೂಕುನುಗ್ಗಲು ಉಂಟಾಗಿ ಕಿಚ್ಚ ಕೈಗೆ ಗಾಯವಾಗಿದೆ.

ಮೊಳಕಾಲ್ಮೂರುಗೆ ಸುದೀಪ್ ಆಗಮಿಸುವ ವೇಳೆ ಅಲ್ಲಿ ನೆರೆದಿದ್ದ ಅಭಿಮಾನಿ ಹಾಗೂ ಬಿಜೆಪಿ ಕಾರ್ಯಕಾರ್ತರು ಸುದೀಪ್ ಅವರನ್ನು ನೋಡಲು ಮುಗಿಬಿದ್ದಿದ್ದಾರೆ. ಇದರಿಂದ ಸುದೀಪ್ ಕೈಗೆ ಸಣ್ಣ ಗಾಯಗಳಾಗಿದೆ.

ಸಣ್ಣ ಹೊಟೇಲ್ ತಿಂಡಿ ಸವಿದ ಕಿಚ್ಚ: ಮೊಳಕಾಲ್ಮೂರು ತೆರಳುವ ವೇಳೆ ಸುದೀಪ್ ಸಣ್ಣ ಹೊಟೇಲ್ ನಲ್ಲಿ ಚಾ- ತಿಂಡಿ ಸೇವಿಸುವ ಮೂಲಕ ಮತ್ತೇ ತನ್ನ ಸರಳತೆಯನ್ನು ಮೆರೆದಿದ್ದರು.