'ಮಣಿಕರ್ಣಿಕ' ಚಿತ್ರ ವೀಕ್ಷಿಸಿದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್

'ಮಣಿಕರ್ಣಿಕ' ಚಿತ್ರ ವೀಕ್ಷಿಸಿದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್

YK   ¦    Jan 19, 2019 04:47:15 PM (IST)
'ಮಣಿಕರ್ಣಿಕ' ಚಿತ್ರ ವೀಕ್ಷಿಸಿದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್

ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಅಭಿನಯದ ಮುಂಬರುವ ಬಹುನಿರೀಕ್ಷಿತ ಚಿತ್ರ 'ಮಣಿಕರ್ಣಿಕ' ಚಿತ್ರವನ್ನು ವೀಕ್ಷಿಸಿದರು.

ಮಣಿಕರ್ಣಿಕ 'ಜಾನ್ಸಿ ರಾಣಿ' ಜೀವನ ಚರಿತ್ರೆಯನ್ನು ಒಳಗೊಂಡ ಚಿತ್ರವಾಗಿದೆ. ಶುಕ್ರವಾರ ಚಿತ್ರ ಪ್ರದರ್ಶನವನ್ನು ರಾಷ್ಟ್ರಪತಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ವೇಳೆ ಚಿತ್ರ ತಂಡದವರು ಭಾಗಿಯಾಗಿದ್ದರು.

ಈ ಸಂಬಂಧ ರಾಷ್ಟ್ರಪತಿ ಟ್ವಿಟರ್ ನಲ್ಲಿ ಫೋಟೋವನ್ನು ಶೇರ್ ಮಾಡಲಾಗಿದೆ

More Images