ಪಡ್ಡೆ ಹುಡುಗರನ್ನು ಹುಚ್ಚೆದ್ದು ಕುಣಿಸಿದ ಸನ್ನಿ ಲಿಯೋನ್ ನೃತ್ಯ

ಪಡ್ಡೆ ಹುಡುಗರನ್ನು ಹುಚ್ಚೆದ್ದು ಕುಣಿಸಿದ ಸನ್ನಿ ಲಿಯೋನ್ ನೃತ್ಯ

YK   ¦    Nov 04, 2018 11:49:46 AM (IST)
ಪಡ್ಡೆ ಹುಡುಗರನ್ನು ಹುಚ್ಚೆದ್ದು ಕುಣಿಸಿದ ಸನ್ನಿ ಲಿಯೋನ್ ನೃತ್ಯ

ಬೆಂಗಳೂರು: ಕನ್ನಡ ಪರ ಸಂಘನೆಗಳ ಭಾರೀ ವಿರೋಧದ ನಡುವೆಯು ಬಾಲಿವುಡ್ ನ ಮೋಹಕ ಬೆಡಗಿ ಸನ್ನಿಲಿಯೋನ್ ನೃತ್ಯ ಕಾರ್ಯಕ್ರಮವು ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಯಾವುದೇ ತೊಂದರೆಗಳಿಲ್ಲದೆ ಯಶಸ್ವಿಯಾಗಿ ನಡೆದಿದೆ. ಇನ್ನೂ ಸನ್ನಿ ಲಿಯೋನ್ ನೃತ್ಯ ಪಡ್ಡೆ ಹುಡುಗರನ್ನು ಹುಚ್ಚೆದ್ದು ಕುಣಿಸುವಂತೆ ಮಾಡಿತ್ತು. 

ವೀಕ್ಷಕರ ಪ್ರಕಾರ, ಸನ್ನಿ ಲಿಯೋನ್ ಕನ್ನಡದಲ್ಲಿ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಕೋರಿ ಕಾರ್ಯಕ್ರಮವನ್ನು ಆರಂಭಿಸಿದರು, ಕನ್ನಡ ಸೇರಿದಂತೆ ವಿವಿಧ ಹಾಡುಗಳಿಗೆ ನೃತ್ಯವನ್ನು ಮಾಡಿದ್ದಾರೆ. ಈ ವೇಳೆ ಗಾಯಕ ರಘು ದೀಕ್ಷಿತ್ ಕೂಡ ಕಾರ್ಯಕ್ರಮವನ್ನು ನೀಡಿದರು.

ಪೊಲೀಸರ ಪ್ರಕಾರ, 'ಕಾರ್ಯಕ್ರಮದಲ್ಲಿ ನಾಲ್ಕು ಸಾವಿರ ಮಂದಿ ಪಾಲ್ಗೊಂಡಿದ್ದು, ಯಾವುದೇ ಗಲಾಟೆಗಳಿಲ್ಲದೆ ಆರಾಮಾಗಿ ನಡೆದಿದೆ. ಯಾವುದೇ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗಳು ಮಾಡಿಲ್ಲ.