2ನೇ ವರ್ಷದ ನಿಟ್ಟೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಎ.16ಕ್ಕೆ ಚಾಲನೆ

2ನೇ ವರ್ಷದ ನಿಟ್ಟೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಎ.16ಕ್ಕೆ ಚಾಲನೆ

SRJ   ¦    Apr 14, 2018 05:44:58 PM (IST)
2ನೇ ವರ್ಷದ ನಿಟ್ಟೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಎ.16ಕ್ಕೆ ಚಾಲನೆ

ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ 2ನೇ ನಿಟ್ಟೆ ಅಂತರಾಷ್ಟ್ರೀಯ ಸಿನಿಮೋತ್ಸವ ನಡೆಯಲಿದ್ದು, ಎಪ್ರಿಲ್ 16ರಂದು ಬೆಳಗ್ಗೆ 10 ಗಂಟೆಗೆ ಚಾಲನೆ ದೊರೆಯಲಿದೆ. ಎಪ್ರಿಲ್ 16 ರಿಂದ 19ರವರೆಗೆ ಮಂಗಳೂರಿನ ಭಾರತ್ ಮಾಲ್ ನ, ಭಾರತ್ ಸಿನಿಮಾಸ್ ನಲ್ಲಿ ವಿವಿಧ ಭಾಷೆಯ ಪ್ರಶಸ್ತಿ ವಿಜೇತ ಸುಮಾರು 60 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಸುಮಾರು 4 ದಿನಗಳ ಕಾಲ ನಡೆಯುವ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ, ಗುಜರಾತಿ, ಜರ್ಮನ್, ಫ್ರೆಂಚ್, ಚೀನಾ, ನೇಪಾಳಿ, ಒಡಿಸ್ಸಿ, ಚಿತ್ರಗಳು ಪ್ರದರ್ಶನವಾಗಲಿದೆ.

ಸಿನಿಮಾಕಾರ ಸದಾಶಿವ ಸುವರ್ಣ ಅವರು ಈ ಸಿನಿಮೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಹಿಂದಿಯ 'ಮುಕ್ತಿ ಭವನ' ಸಿನಿಮಾವು ಮೊದಲ ಸಿನಿಮಾವಾಗಿ ಪ್ರದರ್ಶನಗೊಳ್ಳಲಿದೆ. ಸಿನಿಮಾ ಪ್ರದರ್ಶನದ ನಂತರ ಹಿರಿಯ ನಿರ್ದೇಶಕ-ನಿರ್ಮಾಪಕರು ಹಾಗೂ ಟೆಕ್ನಿಷಿಯನ್ ಗಳ ಜೊತೆ ಮಾತು-ಕತೆ ಕೂಡ ನಡೆಯಲಿದೆ.

ಕನ್ನಡದ ಸುಮಾರು 13 ಸಿನಿಮಾಗಳು, ಮಲಯಾಳಂ ಭಾಷೆಯ 8, ಗುಜರಾತಿ-ಮರಾಠಿ-ಕೊಂಕಣಿಯ 12 ಸಿನಿಮಾಗಳು, ಬೆಂಗಾಲಿ-ಅಸ್ಸಾಂ-ಒಡಿಸ್ಸಿಯ 6 ಚಿತ್ರಗಳು, ಹಿಂದಿಯ 9 ಸಿನಿಮಾ, ತಮಿಳಿನ 5 ಚಿತ್ರಗಳ ಜೊತೆಗೆ 5 ಸಾಕ್ಷ್ಯ ಚಿತ್ರ ಹಾಗೂ 5 ವಿದೇಶಿ ಚಿತ್ರಗಳು ಪ್ರದರ್ಶನವಾಗಲಿದೆ.

More Images