ಮಧು ಸಾವಿನ ತನಿಖೆ ತೀವ್ರಗೊಳಿಸಲು ನಟ ದರ್ಶನ್ ಆಗ್ರಹ

ಮಧು ಸಾವಿನ ತನಿಖೆ ತೀವ್ರಗೊಳಿಸಲು ನಟ ದರ್ಶನ್ ಆಗ್ರಹ

HSA   ¦    Apr 20, 2019 02:50:07 PM (IST)
ಮಧು ಸಾವಿನ ತನಿಖೆ ತೀವ್ರಗೊಳಿಸಲು ನಟ ದರ್ಶನ್ ಆಗ್ರಹ

ಬೆಂಗಳೂರು: ಅನುಮಾನಾಸ್ಪದವಾಗಿ ಮೃತಪಟ್ಟಿರುವ ರಾಯಚೂರು ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಮಧು ಸಾವಿನ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ನಡೆಯಬೇಕು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವಿಟ್ಟರ್ ನಲ್ಲಿ ಆಗ್ರಹಿಸಿದರು.

ಅತ್ಯಾಚಾರ ಮತ್ತು ಕೊಲೆ ಕೃತ್ಯಕ್ಕೆ ಇನ್ನಷ್ಟು ಕಠಿಣ ಕಾನೂನು ದೇಶದಲ್ಲಿ ಬರಬೇಕು. ಅಮಾನುಷ ಕೃತ್ಯವೆಸಗಿರುವ ಕೀಚಕರಿಗೆ ಕಾನೂನುಬದ್ಧವಾಗಿ ಶಾಸ್ತಿಯಾಗಬೇಕು ಎಂದು ಕೋರಿಕೊಳ್ಳುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.