'ಪಡ್ಡೆಹುಲಿ' ಚಿತ್ರಕ್ಕೆ ಅದ್ದೂರಿಯಾಗಿ ಚಾಲನೆ ನೀಡಿದ ಪುನೀತ್, ಕಿಚ್ಚ ಸುದೀಪ್

'ಪಡ್ಡೆಹುಲಿ' ಚಿತ್ರಕ್ಕೆ ಅದ್ದೂರಿಯಾಗಿ ಚಾಲನೆ ನೀಡಿದ ಪುನೀತ್, ಕಿಚ್ಚ ಸುದೀಪ್

YK   ¦    Mar 12, 2018 11:43:59 AM (IST)
'ಪಡ್ಡೆಹುಲಿ' ಚಿತ್ರಕ್ಕೆ ಅದ್ದೂರಿಯಾಗಿ ಚಾಲನೆ ನೀಡಿದ ಪುನೀತ್, ಕಿಚ್ಚ ಸುದೀಪ್

ಬೆಂಗಳೂರು:ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಟಿಸಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿರುವ 'ಪಡ್ಡೆಹುಲಿ’ ಚಿತ್ರದ ಮುಹೂರ್ತಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅದ್ಧೂರಿಯಾಗಿ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಇನ್ನೂ ಚಿತ್ರದ ಮುಹೂರ್ತ ಬೆಂಗಳೂರಿನ ಬನಶಂಕರಿ ಬಳಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ನಡೆಯಿತು.

ಇನ್ನೂ ಚಿತ್ರವನ್ನು `ರಾಜಹುಲಿ’, `ಜಾನ್ ಜಾನಿ ಜನಾರ್ದನ್’ ಹಾಗೂ `ಸಂಹಾರ’ ಖ್ಯಾತಿಯ ಗುರು ದೇಶ್‍ಪಾಂಡೆ ನಿರ್ದೇಶನ ಮಾಡಲಿದ್ದಾರೆ. ಚಿತ್ರದಲ್ಲಿ ಶ್ರೇಯಸ್ ಗೆ ನಾಯಕಿಯಾಗಿ ನಿಶ್ವಿಕಾ ನಟಿಸಲಿದ್ದಾರೆ.

ಕಿಚ್ಚ ಸುದೀಪ್ ಪಡ್ಡೆಹುಲಿ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭಾಶಯ ತಿಳಿಸಿದರೆ, ಪುನೀತ್ ರಾಜ್‍ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಶುಭಕೋರಿದರು. ಮುಹೂರ್ತದ ವೇಳೆ ಚಿತ್ರರಂಗದ ಅನೇಕ ಗಣ್ಯರು ಭಾಗಿಯಾದರು.