ಫ್ಲ್ಯಾಟ್ ಬಾಡಿಗೆ ಕಟ್ಟದ ಮಲ್ಲಿಕಾ ಶೆರಾವತ್ ಹೊರದಬ್ಬಿದ ಫ್ರಾನ್ಸ್ ಕೋರ್ಟ್!

ಫ್ಲ್ಯಾಟ್ ಬಾಡಿಗೆ ಕಟ್ಟದ ಮಲ್ಲಿಕಾ ಶೆರಾವತ್ ಹೊರದಬ್ಬಿದ ಫ್ರಾನ್ಸ್ ಕೋರ್ಟ್!

HSA   ¦    Jan 10, 2018 02:08:43 PM (IST)
ಫ್ಲ್ಯಾಟ್ ಬಾಡಿಗೆ ಕಟ್ಟದ ಮಲ್ಲಿಕಾ ಶೆರಾವತ್ ಹೊರದಬ್ಬಿದ ಫ್ರಾನ್ಸ್ ಕೋರ್ಟ್!

ಪ್ಯಾರಿಸ್: ಒಂದು ಕಾಲದಲ್ಲಿ ಪಡ್ಡೆ ಹುಡುಗರ ಕನಸಿನ ಕನ್ಯೆಯಾಗಿದ್ದ ಮಲ್ಲಿಕಾ ಶೆರಾವತ್ ಈಗ ಫ್ರಾನ್ಸ್ ನಲ್ಲಿ ಬಾಡಿಗೆ ಕಟ್ಟಲು ಹಣವಿಲ್ಲದೆ ಅಪಾರ್ಟ್ ಮೆಂಟ್ ನಿಂದ ಹೊರಹಾಕಲ್ಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ.

ಲಕ್ಷಾಂತರ ರೂಪಾಯಿ ಬಾಡಿಗೆ ಬಾಕಿ ಇಟ್ಟುಕೊಂಡಿರುವ ಶೆರಾವತ್ ಅವರನ್ನು ಫ್ರಾನ್ಸ್ ಕೋರ್ಟ್, ಅಪಾರ್ಟ್ ಮೆಂಟ್ ನಿಂದ ಹೊರಹಾಕುವಂತೆ ಆದೇಶ ನೀಡಿದೆ ಎಂದು ವರದಿಗಳು ತಿಳಿಸಿವೆ.

ಶೆರಾವತ್ ದಂಪತಿ ಕಳೆದ ಒಂದು ವರ್ಷದಿಂದ ಯಾವುದೇ ಬಾಡಿಗೆ ಪಾವತಿಸಿಲ್ಲ. ಶೆರಾವತ್ ಳ ಫ್ರೆಂಚ್ ಮೂಲದ ಪತಿ ಸಿರಿಲ್ ಸುಮಾರು 78,787 ಯುರೋಸ್(ಸರಿಸುಮಾರು 59 ಲಕ್ಷ) ಬಾಡಿಗೆ ಬಾಕಿ ಇರಿಸಿಕೊಂಡಿದ್ದಾರೆ ಎಂದು ಮಾಲಕ ದೂರು ದಾಖಲಿಸಿದ್ದರು.

ಶೆರಾವತ್ ದಂಪತಿ ತಿಂಗಳಿಗೆ 6,054 ಯುರೋ ಬಾಡಿಗೆ ಮೇಲೆ ಕರಾರು ಮಾಡಿಕೊಂಡು ವಾಸಿಸಲು ಆರಂಭಿಸಿದ್ದರು. 2017 ಜನವರಿ 1ರಿಂದ ಇದುವರೆಗೆ ಯಾವುದೇ ಬಾಡಿಗೆ ಪಾವತಿ ಮಾಡಿಲ್ಲವೆಂದು ಮಾಲಕ ದೂರಿನಲ್ಲಿ ತಿಳಿಸಿದ್ದಾರೆ.

ನಾನು ಈ ಮೊದಲು ಕೂಡ ಹೇಳಿದ್ದೇನೆ ಮತ್ತು ಈಗಲೂ ಹೇಳುತ್ತಿದ್ದೇನೆ. ನನಗೆ ಪ್ಯಾರಿಸ್ ನಲ್ಲಿ ಯಾವುದೇ ಫ್ಲ್ಯಾಟ್ ಇಲ್ಲ ಅಥವಾ ಬಾಡಿಗೆಗೆ ಪಡೆದಿಲ್ಲ. ನಾನು ಕಳೆದ 8 ತಿಂಗಳಿಂದ ಲಾಸ್ ಆ್ಯಂಜಲೀಸ್ ಮತ್ತು ಭಾರತದಲ್ಲಿದ್ದೇನೆ. ನಾನು ಪ್ಯಾರಿಸ್ ನಲ್ಲಿ ವಾಸಿಸುತ್ತಿಲ್ಲ. ಗಾಳಿಸುದ್ದಿಗಳನ್ನು ಹಬ್ಬಿಸಬೇಡಿ ಎಂದು 41ರ ಹರೆಯದ ಮಲ್ಲಿಕಾ ಶೆರಾವತ್ ಟ್ವೀಟ್ ಮಾಡಿದ್ದಾರೆ.