50 ಜೋಡೆತ್ತಿನೊಂದಿಗೆ ಕುರುಕ್ಷೇತ್ರ ಚಿತ್ರಕ್ಕೆ ಸ್ವಾಗತ

50 ಜೋಡೆತ್ತಿನೊಂದಿಗೆ ಕುರುಕ್ಷೇತ್ರ ಚಿತ್ರಕ್ಕೆ ಸ್ವಾಗತ

LK   ¦    Aug 09, 2019 05:46:07 PM (IST)
 50 ಜೋಡೆತ್ತಿನೊಂದಿಗೆ ಕುರುಕ್ಷೇತ್ರ ಚಿತ್ರಕ್ಕೆ ಸ್ವಾಗತ

ಮಂಡ್ಯ: ಕುರುಕ್ಷೇತ್ರ ಚಿತ್ರವನ್ನು ದಚ್ಚು ಅಭಿಮಾನಿಗಳು 50 ಜೋಡೆತ್ತುಗಳ ಮೆರವಣಿಗೆಯೊಂದಿಗೆ ಭರ್ಜರಿಯಾಗಿ ಸ್ವಾಗತಿಸಿಸುವ ಮೂಲಕ ಗಮನಸೆಳೆದಿದ್ದಾರೆ.

ದರ್ಶನ್‍ಗೆ ಇದು 50ನೇ ಚಿತ್ರವಾದ್ದರಿಂದ 50 ಜೋಡೆತ್ತುಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಜೊತೆಗೆ 50 ಸಾವಿರ ಲಡ್ಡುಗಳನ್ನು ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಹಂಚಲಾಯಿತು.

ನಗರದ ಮೂರು ಚಿತ್ರ ಮಂದಿರಗಳಲ್ಲಿ ಕುರುಕ್ಷೇತ್ರ ಬಿಡುಗಡೆಯಾಗಿದೆ. ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಜನತೆ ಜೀವ ಬಿಡುತ್ತಿದ್ದಾರೆ. ಆದರೆ, ಇಲ್ಲಿ ಅಭಿಮಾನಿಗಳು ದುಂದು ವೆಚ್ಚ ಮಾಡಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಟೀಕಿಸುತ್ತಿದ್ದರು.

ಇದೇ ಹಣವನ್ನು ಉತ್ತರದ ಜನತೆಗೆ ಆಹಾರ ಕೊಂಡುಕೊಳ್ಳಲು ನೀಡಬಹುದಿತ್ತು ಎಂಬ ಮಾತುಗಳು ಕೇಳಿ ಬಂದವು. ಬಟ್ಟೆ, ಹೊದಿಕೆಯನ್ನೂ ಸಂಗ್ರಹ ಮಾಡಿ ನೀಡಿದ್ದರೆ ಉತ್ತಮ ಎಂಬುದರ ಜೊತೆಗೆ ಇಲ್ಲಿಗೆ ಖರ್ಚು ಮಾಡುವ ಹಣವನ್ನು ಸಿಎಂ ನಿಧಿಗೆ ನೀಡಬಹುದಿತ್ತು ಎಂಬ ಮಾತುಗಳು ಕೇಳಿ ಬಂದವು.