ಸಲ್ಮಾನ್ ಖಾನ್ ಹತ್ಯೆಗೆ ಸಂಚು- ಒಬ್ಬ ಬಂಧನ

ಸಲ್ಮಾನ್ ಖಾನ್ ಹತ್ಯೆಗೆ ಸಂಚು- ಒಬ್ಬ ಬಂಧನ

YK   ¦    Jun 10, 2018 12:04:16 PM (IST)
ಸಲ್ಮಾನ್ ಖಾನ್ ಹತ್ಯೆಗೆ ಸಂಚು- ಒಬ್ಬ ಬಂಧನ

ಹೈದರಾಬಾದ್‌: ನಟ ಸಲ್ಮಾನ್‌ ಖಾನ್‌ ಹತ್ಯೆಗೆ ಸಂಚು ರೂಪಿಸಿದ್ದು ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯನೊಬ್ಬನನ್ನು  ಪೊಲೀಸರು ಬಂಧಿಸಿದ್ದಾರೆ.

ಸಂಪತ್‌ ನೆಹ್ರಾ ಬಂಧಿತ ಆರೋಪಿ. ಆತನನ್ನು ಜೂನ್‌ 6 ರಂದೇ ವಶಕ್ಕೆ ಪಡೆದಿದ್ದು, ಹರಿಯಾಣಕ್ಕೆ ವಿಶೇಷ ಪೊಲೀಸ್‌ ಪಡೆಗಳು ಕರೆತರುತ್ತಿರುವ ಬಗ್ಗೆ ತಿಳಿದು ಬಂದಿದೆ.  

ಕೃಷ್ಣ ಮೃಗ ಬೇಟೆಯಾಡಿದ ಕಾರಣಕ್ಕಾಗಿ ಹತ್ಯೆಗೆ ಸಂಚು ಮಾಡಲಾಗಿದ್ದು , ಸಲ್ಮಾನ್‌ ನಿವಾಸದ ಬಳಿ ಅಭಿಮಾನಿಯ ಸೋಗಿನಲ್ಲಿ  ತೆರಳಿ ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಲಾರೆನ್ಸ್‌ ಬಿಷ್ಣೋಯಿ ಜನವರಿಯಲ್ಲಿ ಸಲ್ಮಾನ್‌ ಖಾನ್‌ರನ್ನು ಹತ್ಯೆ ಮಾಡುವುದಾಗಿ ಘೋಷಿಸಿದ್ದ.  ಆ ಬಳಿಕ ಸಲ್ಮಾನ್‌ ಖಾನ್‌ ಶೂಟಿಂಗ್‌ ನಿರತರಾಗಿರುವ ಸ್ಥಳಗಳಲ್ಲಿ ವ್ಯಾಪಕ ಭದ್ರತೆ ಕಲ್ಪಿಸಲಾಗಿತ್ತು. 

1998ರ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ 5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಸಲ್ಮಾನ್‌ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.