ನಟ ದಿಲೀಪ್ ಅರ್ಜಿ: ಕೇರಳ ಸರ್ಕಾರ, ಸಿಬಿಐಗೆ ನೋಟಿಸ್

ನಟ ದಿಲೀಪ್ ಅರ್ಜಿ: ಕೇರಳ ಸರ್ಕಾರ, ಸಿಬಿಐಗೆ ನೋಟಿಸ್

Jun 17, 2018 11:38:38 AM (IST)
ನಟ ದಿಲೀಪ್ ಅರ್ಜಿ: ಕೇರಳ ಸರ್ಕಾರ, ಸಿಬಿಐಗೆ ನೋಟಿಸ್

ಕೊಚ್ಚಿ: ಮಲಯಾಳಂ ನಟಿಯೊಬ್ಬರ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ಎದುರಿಸುತ್ತಿರುವ ಮಲಯಾಳ ನಟ ದಿಲೀಪ್ ಅವರು ಸಲ್ಲಿಸಿದ್ದ ಅರ್ಜಿ ಸಂಬಂಧ, ರಾಜ್ಯ ಸರ್ಕಾರ ಮತ್ತು ಸಿಬಿಐಗೆ ಕೇರಳ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.

ರಾಜ್ಯಪೊಲೀಸ್ ಇಲಾಖೆಯ ನಿಯಂತ್ರಣದಿಂದ ಹೊರತಾದ ಸ್ವತಂತ್ರ ತನಿಖಾ ಸಂಸ್ಥೆಯಿಂದ ಪ್ರಕರಣದ ತನಿಖೆ ನಡೆಸುವಂತೆ ದಿಲೀಪ್‌ ಅರ್ಜಿಯಲ್ಲಿ ಕೋರಿ ವಿನಂತಿಸಿದ್ದರು.

ಇದನ್ನು ವಿರೋಧಿಸಿರುವ ಸರ್ಕಾರ, ವಿಚಾರಣೆ ವಿಳಂಬವಾಗುವಂತೆ ನೋಡಿಕೊಳ್ಳಲು ನಟ ಈ ನಾಟಕ ಆಡುತ್ತಿದ್ದಾರೆ ಎಂದು ಟೀಕಿಸಿದೆ. ಕೇರಳ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಯನ್ನು ಅನ್ಯಾಯ, ಪಕ್ಷಪಾತ ಹಾಗೂ ದುರುದ್ದೇಶದಿಂದ ನಡೆಸುತ್ತಿದೆ ಎಂದು ದಿಲೀಪ್‌ ಅರ್ಜಿಯಲ್ಲಿ ದೂರಿದ್ದಾರೆ.