ರಜನಿಕಾಂತ್, ಅಕ್ಷಯ್ ಕುಮಾರ್ ನಟನೆಯ 2.0 ಸಿನಿಮಾದ ಟೀಸರ್ ಬಿಡುಗಡೆ

ರಜನಿಕಾಂತ್, ಅಕ್ಷಯ್ ಕುಮಾರ್ ನಟನೆಯ 2.0 ಸಿನಿಮಾದ ಟೀಸರ್ ಬಿಡುಗಡೆ

HSA   ¦    Sep 13, 2018 01:38:52 PM (IST)
ರಜನಿಕಾಂತ್, ಅಕ್ಷಯ್ ಕುಮಾರ್ ನಟನೆಯ 2.0 ಸಿನಿಮಾದ ಟೀಸರ್ ಬಿಡುಗಡೆ

ಬೆಂಗಳೂರು: ಬಹುನಿರೀಕ್ಷಿತ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಿರುವಂತಹ 2.0 ಸಿನಿಮಾದ ಟೀಸರ್ ಗುರುವಾರ ಬಿಡುಗಡೆಯಾಗಿದೆ.

ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅವರ ನಟಿಸಿರುವಂತಹ ಚಿತ್ರದ ಟೀಸರ್ ನೋಡಿದ ಬಳಿಕ ಸಿನಿಮಾ ನೋಡಲು ಸಿನಿ ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ.

ಸುಮಾರು 530 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರವು ನಿರ್ಮಾಣವಾಗಿದೆ. ಚಿತ್ರದಲ್ಲಿ ಹಲವು ಮೈನವಿರೇಳಿಸುವಂತಹ ಸಾಹಸ ದೃಶ್ಯಗಳು ಇರುವುದು ಟೀಸರ್ ನಿಂದ ತಿಳಿದುಬರುತ್ತಿದೆ.

ಅಕ್ಷಯ್ ಕುಮಾರ್ ಈ ಪಾತ್ರದಲ್ಲ ವಿಲನ್ ಆಗಿ ನಟಿಸಿದ್ದಾರೆ. ನಾಯಕಿಯಾಗಿ ಆ್ಯಮಿ ಜಾಕ್ಸನ್ ನಟಿಸಿದ್ದಾರೆ. ಶಂಕರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನ.29ರಂದು ಈ ಚಿತ್ರ ಬಿಡುಗಡೆಯಾಗಲಿದೆ.