ಡೆಡ್ಲಿ ಕೊರೊನಾ : ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಸಿಎಂ ಬಿಎಸ್ ವೈ

ಡೆಡ್ಲಿ ಕೊರೊನಾ : ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಸಿಎಂ ಬಿಎಸ್ ವೈ

YK   ¦    Mar 24, 2020 08:08:03 AM (IST)
ಡೆಡ್ಲಿ ಕೊರೊನಾ : ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಸಿಎಂ ಬಿಎಸ್ ವೈ

ಬೆಂಗಳೂರು: ಕೋವಿಡ್-೧೯ ವೈರಸ್ ನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್ ೩೧ರ ವರೆಗೆ ಕರ್ನಾಟಕ ರಾಜ್ಯ ಲಾಕ್ ಡೌನ್ ಆಗಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ಹೇಳಿದರು.

ಈ ಹಿನ್ನೆಲೆ ರಾಜ್ಯದ ಜತೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಅವರು, ಎರಡು ೨ ತಿಂಗಳ ಪಡಿತರ ಮುಂಗಡ ಬಿಡುಗಡೆ, ಸಾಮಾಜಿಕ ಭದ್ರತಾ ಪಿಂಚಣಿ ಮುಂಗಡ ಬಿಡುಗಡೆ, ಬಡವರ ಬಂಧು ಸಾಲ ಮನ್ನಾ ಮತ್ತು ಕಟ್ಟಡ ಕಾರ್ಮಿಗರಿಗೆ ತಲಾ ೧೦೦೦ ನೀಡಲಾಗುವುದು ಎಂದು ಘೋಷಿಸಿದರು.

ರಾಜ್ಯದ ಎಲ್ಲಾ ಜನರು ಒಂದಾಗಿ ಕೋವಿಡ್ ೧೯ರ ವಿರುದ್ಧ ಹೋರಾಟ ಸಡೆಸಬೇಖಿದೆ. ಮನೆಯಿಂದ ಹೊರಬರದೆ ಸೋಂಕಿತರಿಂದ ದೂರು ಉಳಿದು ಕೊರೊನಾ ವೈರಸ್ ನ್ನು ಮಟ್ಟ ಹಾಕಬೇಕಿದೆ. ರಾಜ್ಯದ ಜನರು ಕರ್ನಾಟದ ಸರ್ಕಾರದ ಆದೇಶವನ್ನು ಪಾಲಿಸಿ ಸಹಕರಿಸಬೇಕಾಗಿ ಎಂದರು.