ಯದುವೀರ್- ತ್ರಿಷಿಕಾ ಕುಮಾರಿಗೆ ಗಂಡು ಮಗು ಜನನ: 6 ದಶಕಗಳ ಬಳಿಕ ಯದುವಂಶಕ್ಕೆ ಪುತ್ರ ಸಂತಾನ

ಯದುವೀರ್- ತ್ರಿಷಿಕಾ ಕುಮಾರಿಗೆ ಗಂಡು ಮಗು ಜನನ: 6 ದಶಕಗಳ ಬಳಿಕ ಯದುವಂಶಕ್ಕೆ ಪುತ್ರ ಸಂತಾನ

YK   ¦    Dec 07, 2017 10:16:57 AM (IST)
ಯದುವೀರ್- ತ್ರಿಷಿಕಾ ಕುಮಾರಿಗೆ ಗಂಡು ಮಗು ಜನನ: 6 ದಶಕಗಳ ಬಳಿಕ ಯದುವಂಶಕ್ಕೆ ಪುತ್ರ ಸಂತಾನ

ಮೈಸೂರು/ಬೆಂಗಳೂರು: ಮೈಸೂರು ಸಂಸ್ಥಾನದ ಯದುವಂಶಕ್ಕೆ ಆರು ದಶಕಗಳ ಬಳಿಕ ಪುತ್ರ ಸಂತಾನ ಪ್ರಾಪ್ತಿಯಾಗಿದೆ. ಮೈಸೂರು ಮಹಾರಾಜ ಯದುವೀರ್ ಪತ್ನಿ ರಾಣಿ ತ್ರಿಷಿಕಾ ಕುಮಾರಿ ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ರಾಣಿ ತ್ರಿಷಿಕಾ ಕುಮಾರಿಗೆ ಗಂಡು ಮಗುವಾಗಿದೆ. ಯುವರಾಜನ ಆಗಮನದಿಂದ ರಾಜಮಾತೆ ಪ್ರಮೋದಾದೇವಿ ಮತ್ತು ರಾಜ ಯದುವೀರ್ ಮುಖದಲ್ಲಿ ಮಂದಹಾಸ ಮೂಡಿದ್ದು, ಇಂದು ಒಡೆಯರ್ ವಂಶಸ್ಥರು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ರಾತ್ರಿ 9.50 ಕ್ಕೆ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದರು. ಮಿಥುನ ರಾಶಿ ಪುನರ್ವಸು ನಕ್ಷತ್ರದಲ್ಲಿ ಗಂಡು ಮಗುವಿನ ಜನನವಾಗಿದ್ದು, ಜ್ಯೋತಿಷ್ಯದ ಪ್ರಕಾರ ಶ್ರೀರಾಮನು ಇದೇ ನಕ್ಷತ್ರದಲ್ಲಿ ಹುಟ್ಟಿದ್ದನು ಎಂದು ಹೇಳಾಗುತ್ತಿದೆ.

ಮಹಾರಾಜ ಯದುವೀರ್, ರಾಜಮಾತೆ ಪ್ರಮೋದಾದೇವಿ ಮತ್ತು ತ್ರಿಷಿಕಾ ತಾಯಿ ಅವರು ರಾಣಿ ತ್ರಿಷಿಕಾ ಕುಮಾರಿಯ ಯೋಗಕ್ಷೆಮವನ್ನು ನೋಡಿಕೊಳ್ಳುತ್ತಿದ್ದಾರೆ. 1953ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ನಂತರ ಮೈಸೂರು ರಾಜಮನೆತನದಲ್ಲಿ ಗಂಡು ಸಂತಾನ ಪ್ರಾಪ್ತಿಯಾಗಿರಲಿಲ್ಲ.