ಇಂದು ಇಡಿ ಅಧಿಕಾರಿಗಳಿಂದ ಡಿಕೆಶಿ ಪುತ್ರಿ ವಿಚಾರಣೆ

ಇಂದು ಇಡಿ ಅಧಿಕಾರಿಗಳಿಂದ ಡಿಕೆಶಿ ಪುತ್ರಿ ವಿಚಾರಣೆ

YK   ¦    Sep 12, 2019 10:22:18 AM (IST)
ಇಂದು ಇಡಿ ಅಧಿಕಾರಿಗಳಿಂದ ಡಿಕೆಶಿ ಪುತ್ರಿ ವಿಚಾರಣೆ

ಬೆಂಗಳೂರು: ಇಡಿ ಅಧಿಕಾರಿಗಳು ಕಾಂಗ್ರೆಸ್ ನಾಯಕ, ಶಾಸಕ ಡಿಕೆ.ಶಿವಕುಮಾರ್ ಪುತ್ರಿ ಐಶ್ವರ್ಯಗೆ ಸಮನ್ಸ್ ಜಾರಿ ಮಾಡಿದ ಹಿನ್ನೆಲೆ ಇಂದು ಇಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ದೆಹಲಿ ನಿವಾಸದಲ್ಲಿ ಅಕ್ರಮ ಹಣ ದೊರೆತ ಪ್ರಕರಣ ಸಂಬಂಧ ಡಿ.ಕೆ.ಶಿವಕುಮಾರ್ ನ್ನು ಇಡಿ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಇಡಿ ಅಧಿಕಾರಿಗಳಿಗೆ ವಿಚಾರಣೆ ವೇಳೆ ಡಿಪುತ್ರಿ ಐಶ್ವರ್ಯ ಖಾತೆಯಲ್ಲೂ 78 ಕೋಟಿ ರೂ ವ್ಯವಹಾತರ ನಡೆದಿದ್ದು ಕಂಡುಬಂದಿದೆ.

ಈ ಸಂಬಂಧ ಇಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಐಶ್ವರ್ಯಗೆ ನೋಟೀಸ್ ಜಾರಿ ಮಾಡಿದ್ದಾರೆ. ಇಂದು ಡಿಕೆಶಿಯನ್ನು ಠಾಣೆಯಿಂದ ದೆಹಲಿಯ ಇಡಿ ಕಚೇರಿಗೆ ವಿಚಾರಣೆಗೆ ಕರೆ ತರಲಾಯಿತು. ಅದಕ್ಕೂ ಮುನ್ನಾ ಠಾಣೆಯಲ್ಲಿ ಡಿಕೆಶಿ ಆರೋಗ್ಯ ತಪಾಸಣೆ ಮಾಡಲಾಯಿತು. ಇಂದು ವಿಚಾರಣೆ ವೇಳೆ ಅಪ್ಪ-ಮಗಳು ಮುಖಾಮುಖಿಯಾಗುವ ಸಾಧ್ಯತೆಯಿದೆ.