ಬಿಬಿಎಂಪಿ ಉಪಮೇಯರ್ ಹುದ್ದೆಗೆ ಭದ್ರೇಗೌಡ ಅವಿರೋಧ ಆಯ್ಕೆ ಖಚಿತ

ಬಿಬಿಎಂಪಿ ಉಪಮೇಯರ್ ಹುದ್ದೆಗೆ ಭದ್ರೇಗೌಡ ಅವಿರೋಧ ಆಯ್ಕೆ ಖಚಿತ

HSA   ¦    Dec 05, 2018 11:42:03 AM (IST)
ಬಿಬಿಎಂಪಿ ಉಪಮೇಯರ್ ಹುದ್ದೆಗೆ ಭದ್ರೇಗೌಡ ಅವಿರೋಧ ಆಯ್ಕೆ ಖಚಿತ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಭದ್ರೇಗೌಡ ಅವರು ಬಿಬಿಎಂಪಿ ಉಪಮೇಯರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ತಿಳಿದುಬಂದಿದೆ.

ಬಿಜೆಪಿಯು ಉಪಮೇಯರ್ ಹುದ್ದೆಗೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಇರುವ ಕಾರಣದಿಂದಾಗಿ ಭದ್ರೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತವೆನ್ನಲಾಗುತ್ತಿದೆ.

ಉಪಮೇಯರ್ ಹುದ್ದೆಗೆ ಭದ್ರೇಗೌಡ ಅವರು ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ಅವಧಿ ಕೂಡ ಮುಕ್ತಾಯವಾಗಿದೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.

ಬಿಬಿಎಂಪಿ ಉಪಮೇಯರ್ ರಮೀಲಾ ಉಮಾಶಂಕರ್ ಅವರು ಅಧಿಕಾರ ಸ್ವೀಕಾರ ಮಾಡಿದ ಕೆಲವೇ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಕಾರಣ ಉಪಮೇಯರ್ ಸ್ಥಾನವು ಖಾಲಿಯಾಗಿದೆ.