ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ

ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ

HSA   ¦    Sep 13, 2018 10:13:50 AM (IST)
ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ

ಬೆಂಗಳೂರು: ದೇಶದಲ್ಲೇ ಕರ್ನಾಟಕ ರಾಜ್ಯವು ಆತ್ಮಹತ್ಯೆ ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಜಾಗತಿಕ ಮಟ್ಟದ ವರದಿಯೊಂದು ಹೇಳಿದೆ.

ಬುಧವಾರ ಪ್ರಕಟಗೊಂಡ ಜಾಗತಿಕ ವರದಿಯ ಪ್ರಕಾರ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ, ಇದರ ಬಳಿಕ ತ್ರಿಪುರಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಇದೆ ಎಂದು ವರದಿಯು ತಿಳಿಸಿದೆ.

ಆತ್ಮಹತ್ಯೆ ಎಂಬ ಆತಂಕಕಾರಿ ಬೆಳವಣಿಗೆ ಬಗ್ಗೆ ಬೆಳಕು ಚೆಲ್ಲಿರುವಂತಹ ವರದಿ ಪ್ರಕಾರ ಕೇರಳ ಮರತ್ತು ಛತ್ತೀಸಗಡದಲ್ಲಿ ಆತ್ಮಹತ್ಯೆಗೈಯುತ್ತಿರುವ ಪುರುಷರ ಸಂಖ್ಯೆಯು ಮಹಿಳೆಯರಿಗೆ ಹೆಚ್ಚಿದೆ. ಆದರೆ ಬೇರೆ ರಾಜ್ಯಗಳಲ್ಲಿ ಇದರಲ್ಲಿ ದೊಡ್ಡ ಅಂತರವಿಲ್ಲ.

ಲ್ಯಾನ್ಸೆಟ್ ಪಬ್ಲಿಕ್ ಜರ್ನಲ್ ನಲ್ಲಿ ಈ ವರದಿಯು ಪ್ರಕಟವಾಗಿದ್ದು, ಬಡತನ, ಸಣ್ಣ ವಯಸ್ಸಿನಲ್ಲಿ ಮದುವೆ, ಕೌಟುಂಬಿಕ ದೌರ್ಜನ್ಯ, ಆರ್ಥಿಕ ಪರಾವಲಂಬನೆ ಮೊದಲಾದವುಗಳು ಇದಕ್ಕೆ ಕಾರಣವೆಂದು ವರದಿಯು ತಿಳಿಸಿದೆ.