ಅನುಶ್ರೇಣಿ-ಯಜಮಾನಿಕೆ ವಿಮರ್ಶಾ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಅನುಶ್ರೇಣಿ-ಯಜಮಾನಿಕೆ ವಿಮರ್ಶಾ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

HSA   ¦    Dec 05, 2018 05:33:52 PM (IST)
ಅನುಶ್ರೇಣಿ-ಯಜಮಾನಿಕೆ ವಿಮರ್ಶಾ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಬೆಂಗಳೂರು: ಕನ್ನಡದ ಕೆ.ಜಿ. ನಾಗರಾಜಪ್ಪ ಅವರ ಚಿಂತನಶೀಲ ಬರಹ ಮಾಲಿಕೆಯಾದ `ಅನುಶ್ರೇಣಿ-ಯಜಮಾನಿಕೆ' ವಿಮರ್ಶಾ ಕೃತಿಗೆ 2018ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದೆ.

2016-17ನೇ ಸಾಲಿನ ಭಾಷಾ ಸಮ್ಮಾನ ಪ್ರಶಸ್ತಿಗೆ ಕನ್ನಡದ ಲೇಖಕ, ಭಾಷಾ ಶಾಸ್ತ್ರಜ್ಞ ಜಿ.ಎಸ್. ವೆಂಕಟಸುಬ್ಬಯ್ಯ ಅವರು ಆಯ್ಕೆಯಾಗಿರುವರು.

2019ರ ಜನವರಿ 29ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಎರಡು ಪ್ರಶಸ್ತಿಗಳು ತಲಾ ಒಂದು ಲಕ್ಷ ರೂಲ ಹಾಗೂ ಸ್ಮರಣಿಕೆ ಒಳಗೊಂಡಿದೆ ಎಂಧು ಅಕಾಡೆಮಿ ಕಾರ್ಯದರ್ಶಿ ಕೆ.ಶ್ರೀನಿವಾಸರಾವ್ ಬುಧವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.