ಅನ್ನಭಾಗ್ಯ ಅಕ್ಕಿ ಕಡಿತ, ಸರಿಯಾದ ಕ್ರಮವಲ್ಲ: ಜಿ.ಪರಮೇಶ್ವರ

ಅನ್ನಭಾಗ್ಯ ಅಕ್ಕಿ ಕಡಿತ, ಸರಿಯಾದ ಕ್ರಮವಲ್ಲ: ಜಿ.ಪರಮೇಶ್ವರ

YK   ¦    Jul 11, 2018 02:39:42 PM (IST)
ಅನ್ನಭಾಗ್ಯ ಅಕ್ಕಿ ಕಡಿತ, ಸರಿಯಾದ ಕ್ರಮವಲ್ಲ: ಜಿ.ಪರಮೇಶ್ವರ

ಬೆಂಗಳೂರು: ಏಳು ಕಿಲೋ ನೀಡುತ್ತಿದ್ದ ಅನ್ನಬಾಗ್ಯ ಅಕ್ಕಿಯನ್ನು ಐದು ಕಿಲೋಗೆ ಇಳಿಸಿಕೊಂಡಿದ್ದು ಸರಿಯಾದ ಕ್ರಮವಲ್ಲ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರವನ್ನು ಬರೆದಿದ್ದೇನೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದ್ದಾರೆ.

ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿ, ‘ಡೀಸೆಲ್, ಪೆಟ್ರೋಲ್ ಮಾರಾಟ ತೆರಿಗೆ ಹೆಚ್ಚಳ ದುಷ್ಪರಿಣಾಮ ಬೀರಲಿದ್ದು, ಇದರಿಂದ ಉಳಿತಾಯವಿದ್ದರು ಜನರ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು.

ಈ ವೇಳೆ ಅವರು ‘ಐದು ಕಿಲೋ ಕಡಿಮೆ ಆಗತ್ತೆ ಎಂದು ಜನ ಕೇಳಿದ್ದಕ್ಕೆ ಏಳು ಕಿಲೋಗೆ ಹೆಚ್ಚಿಸಲಾಗಿತ್ತು. ಜನರಿಗೂ ಸಮಾಧಾನ ಆಗಿತ್ತು. ಪೌಷ್ಠಿಕಾಂಶ ಹೆಚ್ಚಳ, ಗುಳೆ ಹೋಗೋದು, ಬಿಕ್ಷೆ ಬೇಡುವವರ ಸಂಖ್ಯೆ ಕಡಿಮೆ‌ ಆಗಿತ್ತು. ಹೀಗಾಗಿ ಮುಖ್ಯಮಂತ್ರಿಗಳು ಇದನ್ನು‌ ಮುಂದುವರೆಸಲು ತೀರ್ಮಾನ ಮಾಡಬೇಕು ಎಂದು ಪತ್ರದಲ್ಲಿ ಬರೆದಿದ್ದೇನೆ’ ಎಂದು ವಿವರಿಸಿದರು.

ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರಾದ ಆರ್.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್, ಪುಟ್ಟರಂಗಶೆಟ್ಟಿ, ರಾಜಶೇಖರ್ ಪಾಟೀಲ, ಪ್ರಿಯಾಂಕ್ ಖರ್ಗೆ, ಶಿವಶಂಕರ ರೆಡ್ಡಿ, ಜಯಮಾಲ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಐವಾನ್ ಡಿಸೋಜಾ, ಎಸ್.ಆರ್ ಪಾಟೀಲ್ ಉಪಸ್ಥಿತರಿದ್ದರು.