ಬಿಎಂಟಿಸಿ ವಿದ್ಯಾರ್ಥಿ ಪಾಸ್ ದರದಲ್ಲಿ ಏರಿಕೆ

ಬಿಎಂಟಿಸಿ ವಿದ್ಯಾರ್ಥಿ ಪಾಸ್ ದರದಲ್ಲಿ ಏರಿಕೆ

YK   ¦    Jun 14, 2019 11:44:44 AM (IST)
ಬಿಎಂಟಿಸಿ ವಿದ್ಯಾರ್ಥಿ ಪಾಸ್ ದರದಲ್ಲಿ ಏರಿಕೆ

ಬೆಂಗಳೂರು: ಬಿಎಂಟಿಸಿ ವಿದ್ಯಾರ್ಥಿಗಳ ಬಸ್ ಪಾಸ್ ದರವನ್ನು ಏರಿಕೆ ಮಾಡಿದೆ. ಒಟ್ಟು 150ರಿಂದ 250ರ ಏರಿಕೆಯಾಗಲಿದೆ ಎಂದು ತಿಳಿದು ಬಂದಿದೆ.

ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಬಸ್ ಪಾಸ್ ದರದಲ್ಲಿ ಏರಿಕೆ ಅನ್ವಯವಾಗಿಲ್ಲ. ಪ್ರೌಢ ಶಾಲಾ ವಿದ್ಯಾರ್ಥಿಗಳ ಬಸ್ ಪಾಸ್ ದರದಲ್ಲಿ ಏರಿಕೆ ಮಾಡಲಾಗಿದೆ. ಪ್ರೌಢ ಶಾಲಾ ವಿದ್ಯಾರ್ಥಿಗಳ ಪಾಸ್ ನಲ್ಲಿ 100, ಪದವವಿ ಪೂರ್ವ ವಿದ್ಯಾರ್ಥಿಗಳ ಪಾಸ್ ನಲ್ಲಿ 150- ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಪಾಸ್ ನಲ್ಲಿ 200ರ ವರೆಗೆ ಮಾಡಲಾಗಿದೆ. ಎಸ್ ಸಿ ಹಾಗೂ ಎಸ್ ಟಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರ ಮುಂದುವರೆಯಲಿದೆ.

ಬಸ್ ಪಾಸ್ ಏರಿಕೆ ಮಾಡಲಾದ ಪಟ್ಟಿ ಹಾಗೂ ಅರ್ಜಿಯನ್ನು www.mybmtc.com/www.mybmtc.karnataka.gov.in ಈ ವೆಬ್ ಸೈಟ್ ನಲ್ಲಿ ದೊರಕಲಿದೆ ಎಂದರು.