ಇನ್ನೂ ಮುಗಿಯದ ಗೊಂದಲ: ಸಿಎಂ ಗಾದಿ ಯಾರಿಗೆ ಎನ್ನುವುದೇ ಪ್ರಶ್ನೆ

ಇನ್ನೂ ಮುಗಿಯದ ಗೊಂದಲ: ಸಿಎಂ ಗಾದಿ ಯಾರಿಗೆ ಎನ್ನುವುದೇ ಪ್ರಶ್ನೆ

HSA   ¦    May 16, 2018 07:56:37 PM (IST)
ಇನ್ನೂ ಮುಗಿಯದ ಗೊಂದಲ: ಸಿಎಂ ಗಾದಿ ಯಾರಿಗೆ ಎನ್ನುವುದೇ ಪ್ರಶ್ನೆ

ಬೆಂಗಳೂರು: ರಾಜಕೀಯ ಪಕ್ಷಗಳ ಚಟುವಟಿಕೆಗಳು ರಾಜಧಾನಿ ಬೆಂಗಳೂರಿನಲ್ಲಿ ಮತ್ತಷ್ಟು ತೀವ್ರಗೊಂಡಿದ್ದು, ಯಾರು ಅಧಿಕಾರಕ್ಕೇರುತ್ತಾರೆ ಎನ್ನುವ ಬಗ್ಗೆ ಇನ್ನು ಕೂಡ ಗೊಂದಲವಿದೆ.

ರಾಜ್ಯಪಾಲರ ನಿರ್ಧಾರವೇ ಅಂತಿಮವಾಗಿದ್ದು, ಒಂದು ಮೂಲಗಳ ಪ್ರಕಾರ ರಾಜ್ಯಪಾಲರು ಅತಿದೊಡ್ಡ ಪಕ್ಷ ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದಾರೆ. ಆದರೆ ಇಂದು ಸಂಜೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ತಮ್ಮಲ್ಲಿ ಒಟ್ಟು 118 ಶಾಸಕರ ಸಂಖ್ಯಾಬಲವಿದೆ ಎಂದು ಶಾಸಕರ ಸಹಿ ಇರುವ ಪತ್ರವನ್ನು ರಾಜ್ಯಪಾಲರಿಗೆ ಒಪ್ಪಿಸಿದ್ದಾರೆ. ಇದರ ಬಳಿಕ ಕಾಂಗ್ರೆಸ್ ನಾಯಕರನ್ನು ಬಸ್ ನಲ್ಲಿ ರೆಸಾರ್ಟ್ ಗೆ ಕರೆದೊಯ್ಯಲಾಗಿದೆ.

ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದರೆ ರಾಜ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್ ಗೆ ಮನವಿ ಮಾಡುವುದಾಗಿ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಅಂತೂ ರಾಜ್ಯ ರಾಜಧಾನಿ ಹಾಗೂ ರಾಜಭವನದ ಸುತ್ತ ರಾಜಕೀಯ ಚಟುವಟಿಕೆಗಳು ತೀವ್ರವಾಗಿದೆ.