ನಾವು ಯಾರಿಗೂ ಆಮಿಷವೊಡ್ಡಿಲ್ಲ: ಪ್ರಕಾಶ್ ಜಾವಡೇಕರ್

ನಾವು ಯಾರಿಗೂ ಆಮಿಷವೊಡ್ಡಿಲ್ಲ: ಪ್ರಕಾಶ್ ಜಾವಡೇಕರ್

HSA   ¦    May 16, 2018 04:15:10 PM (IST)
ನಾವು ಯಾರಿಗೂ ಆಮಿಷವೊಡ್ಡಿಲ್ಲ: ಪ್ರಕಾಶ್ ಜಾವಡೇಕರ್

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆಯೆಂಬ ಆರೋಪವು ನಿರಾಧಾರವಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವಡೇಕರ್ ತಿಳಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ ಕೆಲವು ಶಾಸಕರಿಗೆ ಅಸಮಾಧಾನವಿದೆ. ನಾವು ಯಾವುದೇ ರೀತಿಯಲ್ಲೂ ಕುದುರೆ ವ್ಯಾಪಾರ ಮಾಡುತ್ತಿಲ್ಲವೆಂದು ಜಾವಡೇಕರ್ ಸ್ಪಷ್ಟಪಡಿಸಿದರು.

ನೂರು ಕೋಟಿ ಆಮಿಷವೊಡ್ಡಲಾಗಿದೆ ಎಂದು ಹೇಳುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕೀಯ ಮಾಡುತ್ತಿದೆ ಎಂದು ಜಾವಡೇಕರ್ ಹೇಳಿದರು.