ನಾಳೆ ದಕ್ಷಿಣ ಕನ್ನಡ, ಉಡುಪಿಗೆ ದೇಶಪಾಂಡೆ ಭೇಟಿ

ನಾಳೆ ದಕ್ಷಿಣ ಕನ್ನಡ, ಉಡುಪಿಗೆ ದೇಶಪಾಂಡೆ ಭೇಟಿ

HSA   ¦    Jun 13, 2018 01:21:29 PM (IST)
ನಾಳೆ ದಕ್ಷಿಣ ಕನ್ನಡ, ಉಡುಪಿಗೆ ದೇಶಪಾಂಡೆ ಭೇಟಿ

ಬೆಂಗಳೂರು: ಮುಂಗಾರಿನ ಆರಂಭದಲ್ಲೇ ಪ್ರವಾಹಪೀಡಿತವಾಗಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್. ವಿ. ದೇಶಪಾಂಡೆ ಅವರು ಜೂನ್ 14(ಗುರುವಾರ) ಭೇಟಿ ನೀಡಲಿದ್ದಾರೆ.

ನಾಳೆ ಬೆಳಗ್ಗೆ 7.30ಕ್ಕೆ ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಲಿರುವ ದೇಶಪಾಂಡೆ ಅವರು 8.30ರ ವೇಳೆ ಹಾನಿಗೀಡಾಗಿರುವ ಪ್ರದೇಶಗಳಿಗೆ ಭೇಟಿ ನೀಡಲಿರುವರು ಮತ್ತು ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ದೇಶಪಾಂಡೆ ಅವರು ಬೆಳಗ್ಗೆ 11 ಗಂಟೆ ವೇಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಇದರ ಬಳಿಕ ಮಧ್ಯಾಹ್ನ ಉಡುಪಿಗೆ ತೆರಳುವರು. ಅಲ್ಲಿ ಕೂಡ ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸುವರು.