ಸಿಎಂ ಕಚೇರಿಗೆ ಮುತ್ತಿಗೆ ಯತ್ನ:ಬಿಎಸ್ ವೈ ಸೇರಿ ಹಲವರು ವಶಕ್ಕೆ

ಸಿಎಂ ಕಚೇರಿಗೆ ಮುತ್ತಿಗೆ ಯತ್ನ:ಬಿಎಸ್ ವೈ ಸೇರಿ ಹಲವರು ವಶಕ್ಕೆ

YK   ¦    Jun 16, 2019 02:10:47 PM (IST)
ಸಿಎಂ ಕಚೇರಿಗೆ ಮುತ್ತಿಗೆ ಯತ್ನ:ಬಿಎಸ್ ವೈ ಸೇರಿ ಹಲವರು ವಶಕ್ಕೆ

ಬೆಂಗಳೂರು: ಸರ್ಕಾರಿ ಭೂಮಿಯನ್ನು ಜಿಂದಾಲ್ ಸಂಸ್ಥೆಗೆ ನೀಡುತ್ತಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ನಡೆಸಿದ ಅಹೋರಾತ್ರಿ ಧರಣಿ ಭಾನುವಾರ ಮುಕ್ತಾಯಗೊಂಡಿದೆ.

ಈ ವೇಳೆ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕುಲು ಯತ್ನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಹಿತ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.

ಈ ವೇಳೆ ಸರ್ಕಾರ ಪರವಾಗಿ ಸ್ಥಳಕ್ಕೆ ಆಗಮಿಸಿದ ಸಚಿವ ವೆಂಕಟರಾವ್ ನಾಡಗೌಡ ಅವರು ಸಿಎಂ ಕುಂಆರಸ್ವಾಮಿ ಬರೆದಿದ್ದ ಪತ್ರವನ್ನು ಯಡಿಯೂರಪ್ಪ ಗೆ ನೀಡಿದರು. ಪತ್ರದಲ್ಲಿ ನಾನು ನಿಮ್ಮ ಜತೆ ಮಾತುಕತೆಗ ಸಿದ್ಧನಿದ್ದೇನೆ ಎಂದು ಬರೆದಿದ್ದಾರೆ. .